ಮುಂಬೈ : ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಜಿ ಆಲ್‌ರೌಂಡರ್ ಕನ್ನಡಿಗ ಸುನಿಲ್ ಜೋಶಿ ಅವರನ್ನು ನೇಮಿಸಲಾಗಿದೆ.
ಮದನ್ ಲಾಲ್, ಆರ್.ಪಿ.ಸಿಂಗ್ ಮತ್ತು ಸುಲಕ್ಷಣಾ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸುನಿಲ್ ಜೋಶಿ ಅವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿದೆ.
ಆಯ್ಕೆ ಸಮಿತಿ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳಿಗೆ ಬುಧವಾರ ಅಂತಿಮ ಸಂದರ್ಶನ ನಡೆಸಲಾಯಿತು. ವೆಂಕಟೇಶ್ ಪ್ರಸಾದ್ ಅವರ ತೀವ್ರ ಪೈಪೋಟಿಯಿಂದಾಗಿ. ಸಲಹಾ ಸಮಿತಿ ಸುನಿಲ್ ಜೋಷಿ ಪರವಾಗಿ ಒಲವು ತೋರಿದ ಕಾರಣ ಜೋಷಿ ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನಕ್ಕೆ ಶಿಫಾರಸ್ಸುಗೊಂಡಿದ್ದಾರೆ, ಆಯ್ಕೆ ಸಮಿತಿ ಸದಸ್ಯರಾಗಿ ಮಾಜಿ ವೇಗಿ ಹರ್ವಿಂದರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ವದೇಶದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ದ ಸರಣಿಗೆ ಹೊಸ ಆಧ್ಯಕ್ಷರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಸದಸ್ಯರನ್ನು ಆಯ್ಕೆ ನಡೆಯಲಿದೆ.
Source : UNI