ಕಡಬ : ಕಳೆದ ವಾರ ಕಡಬದ ಶಿಕ್ಷಕರೋರ್ವರಿಗೆ ಕೊರೊನಾ ಪಾಸಿಟಿವ್ ಬಂದು ಬಳಿಕ ಅವರು ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಇತ್ತೀಚೆಗೆ ಅವರ ವರದಿ ನೆಗೆಟಿವ್ ಬಂದಿತ್ತು.
ಮಾತ್ರವಲ್ಲದೆ ಅವರ ಸಂಪರ್ಕಕ್ಕೆ ಬಂದ 12 ವರದಿಗಳು ನೆಗೆಟಿವ್ ಬಂದು ಕಡಬದ ಜನತೆ ನಿರಾಳವಾಗಿರುವ ವೇಳೆಯಲ್ಲಿ ಇದೀಗ ಮತ್ತೊಂದು ಅಘಾತ ಎದುರಾಗಿದ್ದು, ಈಗಾಗಲೇ ಕ್ವಾರಂಟೈನ್‌ನಲ್ಲಿದ್ದ ಕಡಬ ಸಿ.ಎ ಬ್ಯಾಂಕ್ ಸಿಬ್ಬಂದಿಯಾಗಿರುವ ನೂಜಿಬಾಳ್ತಿದ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂಬುದಾಗಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಡಬ ಸಿ.ಎ ಬ್ಯಾಂಕ್ ಕೊರೊನಾ ಪೀಡಿತ ಶಿಕ್ಷಕರೋರ್ವರು ಭೇಟಿ ನೀಡಿದ್ದರು ಎಂಬ ಕಾರಣದಿಂದಾಗಿ ಅಲ್ಲಿನ ಸಿಬ್ಬಂದಿಗಳು ಹಾಗೂ ನಿರ್ದೇಶಕರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿತ್ತು, ಇದೀಗ ಅವರ ಒಂದು ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಇದೀಗ ಎರಡನೇ ಕೊರೊನಾ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ಆರೋಗ್ಯ, ಕಂದಾಯ, ಪೋಲಿಸ್ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿದ್ದಾರೆ.
ಕೆಲವು ಅಂಗಡಿಗಳ ಸಹಿತ ಸಿ. ಎ ಬ್ಯಾಂಕ್ ಸುತ್ತ 100 ಮೀ ಪ್ರದೇಶ ಮತ್ತು ಕೊರೊನಾ ಭಾದಿತ ವ್ಯಕ್ತಿಯ ಮನೆ ಇರುವ ನೂಜಿಬಾಳ್ತಲ ಗ್ರಾಮದ ನಿಡ್ಡೋಡಿ ಪ್ರದೇಶದಲ್ಲಿ೫ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.
Follow us on Social media