ಕಡಬ : ಐತ್ತೂರು ಗ್ರಾಮದ ಕಲ್ಲಾಜೆಯಲ್ಲಿ ಯುವತಿಯೋರ್ವಳಿಗೆ ಅನ್ಯ ಮತೀಯ ಯುವಕ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಕೀರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಕೀರ್ ಕಳೆದ ಎರಡು ದಿನಗಳಿಂದ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟಿಯಲ್ಲಿ ಬಂದು ಅಡ್ಡ ನಿಂತು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವಿಷಯವನ್ನು ಮನೆಯವರಿಗೂ ತಿಳಿಸಿದ್ದೇನೆ. ಮಾ.28ರಂದು ಕಲ್ಲಾಜೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಮನೆಯವರೂ ತನ್ನ ಜೊತೆಗೆ ಬಂದಿದ್ದು, ಇದೇ ವೇಳೆ ಯುವಕ ಮೈ ಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ. ಬಿಡಿಸಲು ಬಂದ ತನ್ನ ಅತ್ತೆಯವರಿಗೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ, ಬಂದ ವಾಹನದಲ್ಲಿ ಪರಾರಿಯಾದ ಎಂದು ಯುವತಿ ಕಡಬ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದೂ ಸಂಘಟನೆ ಕಾರ್ಯಕರ್ತರ ಜಮಾವಣೆ:
ಹಿಂದೂ ಯುವತಿಗೆ ಅನ್ಯಮತಿಯ ಯುವಕನಿಂದ ಲೈಂಗಿಕ ದೌರ್ಜನ್ಯ ಆಗಿರುವ ಆರೋಪದಲ್ಲಿ ಈ ಬಗ್ಗೆ ಯುವಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಡಬ ಠಾಣೆಯ ಎದುರು ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು.