ನವದೆಹಲಿ : ಕಂಪೆನಿಗಳ (2ನೇ ತಿದ್ದುಪಡಿ) ಮಸೂದೆ- 2019ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆ ನಂತರ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್, ಮಸೂದೆಯು ಸಾಲ ಮರುಪಾವತಿ ಸರಿಯಾಗಿ ಮಾಡದ ಸಂದರ್ಭದಲ್ಲಿ ಅಂತವರನ್ನು ಅಪರಾಧಿಗಳೆಂದು ಪರಿಣಿಸುವುದನ್ನು ತೆಗೆದುಹಾಕುತ್ತದೆ. ಈ ವಿಷಯದಲ್ಲಿ ವಸ್ತುನಿಷ್ಠವಾಗಿ ನಿರ್ಧರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಈ ಮಸೂದೆ, ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸುಧಾರಿಸಲು ನೆರವಾಗಲಿದೆ. ಅಲ್ಲದೆ, ಮಸೂದೆಯು ಕಾನೂನು ಪಾಲಿಸುವ ಕಾರ್ಪೊರೇಟ್ ಕಂಪೆನಿಗಳ ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು.
ಈ ಹಿಂದೆ, ಕಂಪೆನಿಗಳ (ತಿದ್ದುಪಡಿ) ಕಾಯ್ದೆ 2015 ರ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ಮಾಡಲಾಗಿತ್ತು.
ಸಚಿವ ಸಂಪುಟದ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.
Source : UNI