ವಾಷಿಂಗ್ಟನ್ : ಕೊರೊನಾ ವೈರಾಣು ನಿಗ್ರಹದಲ್ಲಿ ಪ್ರಮುಖ ಪಾತ್ರ ವಹಿಸುವ ಹೈಡ್ರೊಕ್ವಿನೋಲೋರೊಕ್ವಿನ್ ಔಷಧಿ ರಫ್ತು ವಿಷಯದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಬಗ್ಗೆ ನೀಡಿದ್ದ ಪ್ರತಿಕಾರ ಹೇಳಿಕೆ, ತೀವ್ರ ಟೀಕೆಗೆ ಗುರಿಯಾಗಿದೆ.
ವಿಪತ್ತಿನ ಪರಿಸ್ಥಿತಿಯಲ್ಲಿ ಯಾವುದೇ ದೇಶವನ್ನು ಬೆದರಿಸುವ ಪ್ರವೃತ್ತಿ, ಧೋರಣೆ ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಭಾರತ ವಿರುದ್ದ ಅಗತ್ಯಬಿದ್ದರೆ ವಾಣಿಜ್ಯ ಪ್ರತೀಕಾರ ಕೈಗೊಳ್ಳಲಾಗುವುದು ಎಂದು ಗುಡುಗಿದ್ದ ಡೊನಾಲ್ಡ್ ಟ್ರಂಪ್ ಈಗ ತಮ್ಮ ಧ್ವನಿ ಬದಲಾಯಿಸಿಕೊಂಡಿದ್ದಾರೆ…!
ದೇಶದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮಲೇರಿಯಾ ನಿಗ್ರಹ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ಇತರ ಔಷಧಿಗಳ ರಫ್ತು ನಿಷೇಧಿಸಲು ಭಾರತ ಸರ್ಕಾರ ನಿರ್ಧರಿಸಿತ್ತು. ಆದರೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಸುವ ನಾವು ಈ ಮೊದಲೇ ಆದೇಶಿಸಿರುವುದರಿಂದ ಅವುಗಳನ್ನು ಭಾರತ ಪೂರೈಸಬೇಕೆಂದು ಅಮೆರಿಕಾ ವಿನಂತಿಸಿತ್ತು.
ಈ ಹಿನ್ನೆಲೆಯಲ್ಲಿ ಅಮೆರಿಕಾ ಸೇರಿದಂತೆ ಕೊರೊನಾದಿಂದ ಬಾಧಿತಗೊಂಡಿರುವ ಎಲ್ಲ ದೇಶಗಳಿಗೆ ಮಾನವೀಯ ದೃಷ್ಟಿಯಿಂದ ಔಷಧಿಗಳನ್ನು ಪೂರೈಸುವುದಾಗಿ ಭಾರತ ಘೋಷಿಸಿದೆ. ಈ ಭಾಗವಾಗಿ ಗುಜರಾತ್‌ನ ಮೂರು ಕಂಪನಿಗಳಿಂದ ಸುಮಾರು ೨೯ ಮಿಲಿಯನ್ ಡೋಸ್ ಔಷಧಗಳು ಅಮೆರಿಕಾ ತಲುಪಿವೆ. ಈ ವಿಷಯದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ೨೯ ದಶಲಕ್ಷಕ್ಕೂ ಹೆಚ್ಚು ಮಾತ್ರೆಗಳನ್ನು ಖರೀದಿಸಿದ್ದೇವೆ. ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾನಾಡಿ, ತುರ್ತಾಗಿ ಔಷಧಿ ರವಾನಿಸಬೇಕು ಎಂದು ನಾನು ಕೊರಿದ್ದೆ, ನರೇಂದ್ರಮೋದಿ ಅವರು ದೊಡ್ಡ ವ್ಯಕ್ತಿ, ತುಂಬಾ ಒಳ್ಳೆಯವರು ಎಂದು ಟ್ರಂಪ್ ಫಾಕ್ಸ್‌ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಹುಟ್ಟಿದ ಮಾರಕ ಕೊರೊನಾ ವೈರಸ್ ಜಗತ್ತನ್ನು ನಡುಗಿಸುತ್ತಿದೆ. ಇಟಲಿ ಮತ್ತು ಸ್ಪೇನ್ ನಂತರ ಅಮೆರಿಕಾದಲ್ಲಿ ಕೊರೊನಾ ಸಾವುಗಳು ಹೆಚ್ಚು. ಅಮೆರಿಕ ಈಗಾಗಲೇ ೧೨ ಸಾವಿರಕ್ಕೂ ಹೆಚ್ಚುಮಂದಿ ಬಲಿಯಾಗಿದ್ದಾರೆ. ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಕೊರೊನಾ ನಿಯಂತ್ರಿಸಲು ಹೈಡ್ರೋಕ್ವಿಕ್ಲೋರೋಕ್ವಿನ್ ಔಷಧಿ ಒದಗಿಸುವ ಮೂಲಕ ತನಗೆ ಸಹಾಯ ಮಾಡುವಂತೆ ಟ್ರಂಪ್ ಮೋದಿಯವರನ್ನು ಕೋರಿದ್ದರು. ಆದರೆ ಭಾರತ ಕೈಗೊಂಡಿದ್ದ ನಿಷೇಧದ ಬಗ್ಗೆ ತಿಳಿದು, ಆರಂಭದಲ್ಲಿ ನಿರಾಶೆಗೊಂಡ ಟ್ರಂಪ್, ಬೆದರಿಸುವ ಪ್ರವೃತ್ತಿ ಅನುಸರಿಸಿದ್ದರು. ಭಾರತದಿಂದ ಔಷಧಿಗಳು ತನ್ನ ದೇಶ ತಲುಪುತ್ತಿದ್ದಂತೆಯೇ ಪ್ರಧಾನಿ ಮೋದಿ ಅವರನ್ನು ಕೊಂಡಾಡುತ್ತಿದ್ದಾರೆ. ಏಷ್ಟಾದರೂ ಅವರು ಟ್ರಂಪ್ ಅಲ್ಲವೇ..!