ನವದೆಹಲಿ: ವಿಶ್ವದಾದ್ಯಂತ ಕೊರೊನಾ ವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಡಿಸೆಂಬರ್ 1ರಿಂದ ಜಾರಿಗೆ ಬರುತ್ತವೆ.
ಮಾರ್ಗಸೂಚಿಯ ಪ್ರಕಾರ, ಪ್ರಯಾಣಿಕರು ಟಿಕೆಟ್ ಬುಕ್ ಮಾಡುವ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ಫಾರ್ಮ್ ಅನ್ನ ಸಲ್ಲಿಸಬೇಕು. ಅಲ್ಲದೇ ಕಳೆದ 14 ದಿನಗಳ ಪ್ರಯಾಣದ ವಿವರವನ್ನು ಸಲ್ಲಿಸಬೇಕು.
ಪ್ರಯಾಣ ಮಾಡುವ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ RT-PCR ಪರೀಕ್ಷಾ ವರದಿಯನ್ನು ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರಯಾಣವನ್ನು ಕೈಗೊಳ್ಳುವ ಮೊದಲು 72 ಗಂಟೆಗಳ ಒಳಗೆ ಪರೀಕ್ಷೆಯನ್ನು ಮಾಡಿಸಬೇಕು.
ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ‘ಅಪಾಯದಲ್ಲಿರುವ ದೇಶಗಳ’ ಪ್ರಯಾಣಿಕರು ಭಾರತಕ್ಕೆ ಬಂದ ನಂತರ ಕೋವಿಡ್-19 ಪರೀಕ್ಷೆಯನ್ನು ಮಾಡಿಸಬೇಕು. ವಿಮಾನ ನಿಲ್ದಾಣದಲ್ಲಿ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಎಂಟು-ದಿನದ ನಂತರ ಮತ್ತೆ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಅಲ್ಲಿ ನೆಗೆಟಿವ್ ಬಂದರೂ ಮುಂದಿನ ಏಳು ದಿನಗಳವರೆಗೆ ಅವರ ಮೇಲೆ ನಿಗಾ ಇರಿಸಿಕೊಳ್ಳಬೇಕು.
ಸಚಿವಾಲಯದ ಪ್ರಕಾರ, ಅಪಾಯದಲ್ಲಿರುವ ದೇಶಗಳೆಂದರೇ ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ, ಹಾಂಗ್ ಕಾಂಗ್, ಇಸ್ರೇಲ್ ಸೇರಿದಂತೆ ಯುರೋಪ್‌ನ ದೇಶಗಳು ಸೇರಿವೆ.
ಹೊಸ ಕೊರೊನಾ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ವಿಶ್ವಸಂಸ್ಥೆ ಇದಕ್ಕೆ ಒಮಿಕ್ರಾನ್ ಎಂದು ಹೆಸರಿಟ್ಟಿದೆ. ಇದು ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ. ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಡಿಸೆಂಬರ್ 1 ರಿಂದ ಜಾರಿಗೆ ಬರುತ್ತವೆ.
ಮಾರ್ಗಸೂಚಿಯ ಪ್ರಕಾರ, ಪ್ರಯಾಣಿಕರು ಟಿಕೆಟ್ ಬುಕ್ ಮಾಡುವ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ಫಾರ್ಮ್ ಅನ್ನ ಸಲ್ಲಿಸಬೇಕು. ಅಲ್ಲದೇ ಕಳೆದ 14 ದಿನಗಳ ಪ್ರಯಾಣದ ವಿವರವನ್ನು ಸಲ್ಲಿಸಬೇಕು.
ಪ್ರಯಾಣ ಮಾಡುವ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ RT-PCR ಪರೀಕ್ಷಾ ವರದಿಯನ್ನು ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರಯಾಣವನ್ನು ಕೈಗೊಳ್ಳುವ ಮೊದಲು 72 ಗಂಟೆಗಳ ಒಳಗೆ ಪರೀಕ್ಷೆಯನ್ನು ಮಾಡಿಸಬೇಕು.
ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ‘ಅಪಾಯದಲ್ಲಿರುವ ದೇಶಗಳ’ ಪ್ರಯಾಣಿಕರು ಭಾರತಕ್ಕೆ ಬಂದ ನಂತರ ಕೋವಿಡ್-19 ಪರೀಕ್ಷೆಯನ್ನು ಮಾಡಿಸಬೇಕು. ವಿಮಾನ ನಿಲ್ದಾಣದಲ್ಲಿ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಎಂಟು-ದಿನದ ನಂತರ ಮತ್ತೆ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಅಲ್ಲಿ ನೆಗೆಟಿವ್ ಬಂದರೂ ಮುಂದಿನ ಏಳು ದಿನಗಳವರೆಗೆ ಅವರ ಮೇಲೆ ನಿಗಾ ಇರಿಸಿಕೊಳ್ಳಬೇಕು.
ಸಚಿವಾಲಯದ ಪ್ರಕಾರ, ಅಪಾಯದಲ್ಲಿರುವ ದೇಶಗಳೆಂದರೇ ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ, ಹಾಂಗ್ ಕಾಂಗ್, ಇಸ್ರೇಲ್ ಸೇರಿದಂತೆ ಯುರೋಪ್‌ನ ದೇಶಗಳು ಸೇರಿವೆ.
ಹೊಸ ಕೊರೊನಾ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ವಿಶ್ವಸಂಸ್ಥೆ ಇದಕ್ಕೆ ಒಮಿಕ್ರಾನ್ ಎಂದು ಹೆಸರಿಟ್ಟಿದೆ. ಇದು ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ.
Follow us on Social media