Breaking News

ಒಳ್ಳೇ ಕಥೆ ಸಿಕ್ಕಿದ್ದಾದರೆ ನಾನು ಕನ್ನಡದಲ್ಲಿ ಅಭಿನಯಿಸಲು ಒಪ್ಪಿಕೊಳ್ಳುವೆ: ಸಂಯುಕ್ತಾ ಹೆಗ್ಡೆ

ಲಾಕ್ ಡೌನ್ ಸಮಯದಲ್ಲಿ ಯಾವುದೇ ಶೂಟಿಂಗ್ ಇಲ್ಲದಿದ್ದರೂ ಜನ್ಮಜಾತ ಪ್ರತಿಭೆಯಾಗಿರುವ ಸಂಯುಕ್ತಾ ಹೆಗ್ಡೆ ತಾವು ಕ್ರಿಯಾಶೀಲವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ಅದ್ಭುತ ನೃತ್ಯ ಕೌಶಲ್ಯ, ವ್ಯಾಯಾಮ ಅಥವಾ ಇತರ ಆಸಕ್ತಿದಾಯಕ ಚಟುವಟಿಕೆಗಳಿಂದ  ಅವರು ಸಂಚಲನ ಮೂಡಿಸುತ್ತಿದ್ದಾರೆ. ನಾನು ಇನ್ನು ಸುಮ್ಮನಿರಲು ಸಾಧ್ಯವಿಲ್ಲ” ಎನ್ನುವ ನಟಿ ತಾವು ವರ್ಕ್ ಹಾಗೂ ಜಿಮ್ ಅನ್ನು ತಪ್ಪಿಸಿಕೊಳ್ಳುತ್ತಿದ್ದೇನೆ. ಆದರೆ ಡ್ಯಾನ್ಸ್ ಮಾತ್ರ ಎಂದಿಗೂ ನಿಲ್ಲಿಸಿಲ್ಲ. ಹೊಸ ಹೊಸ ಬಗೆಯ ಲಾ ಪ್ರಕಾರಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದ್ದೇನೆ ಎಂದು ಆಕೆ ಹೇಳಿದ್ದಾರೆ.

“ನಾನು ಬರೆಯುವುದು ಹಾಗೂ ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ  ಒಂದೆರಡು ಜನರಿಂದ  ಆಕ್ಟಿಂಗ್ ಕ್ಲಾಸ್ ತೆಗೆದುಕೊಂಡಿದ್ದೇನೆ. ಇವೆಲ್ಲವೂ ಆನ್‌ಲೈನ್ ಮೂಲಕವೇ ಆಗಿದೆ. ನಾನು ನನ್ನ ಹೆತ್ತವರೊಂದಿಗೆ ಸಮಯ ಕಳೆಯುತ್ತಿದ್ದು ಇದರಿಂದ ಖುಷಿಯಾಗಿದೆ. 

ವಾಚ್ ಮ್ಯಾನ್, ಮತ್ತು ಜಯಂ ರವಿ ಎದುರು ನಟಿಸಿದ ಕೋಮಲಿ ಚಿತ್ರಗಳ ಮೂಲಕ ಸಮುಕ್ತ ಕಾಲಿವುಡ್ ನಲ್ಲಿ ತನ್ನ ಛಾಪು ಮೂಡಿಸಿದ್ದಾರೆ. . ಸಂಯುಕ್ತಾ ಅವರನ್ನು ಬೆರಳೆಣಿಕೆಯಷ್ಟು ತಮಿಳು ಚಲನಚಿತ್ರ ನಿರ್ಮಾಪಕರು ಸಂಪರ್ಕಿಸಿದ್ದು ಲಾಕ್ ಡೌನ್ ಸಮಯದಲ್ಲಿ ಕೆಲವು ಸ್ಕ್ರಿಪ್ಟ್‌ಗಳ ಓದುವಿಕೆ ನಡೆದಿದೆ. ಆದರೆ ಯಾವುದೂ ಅಂತಿಮವಾಗಿಲ್ಲ. “ಜೀವನವು ಸಾಮಾನ್ಯ ಸ್ಥಿತಿಗೆ ಬರಬೇಕೆಂದು ನಾನು ಬಯಸುತ್ತೇನೆ. ನಾನು ಮುಂದಿನ ದಿನಗಳಲ್ಲಿ ಅಭಿನಯಿಸಲು ಬಯಸಿದ್ದು ಲಾಕ್‌ಡೌನ್‌ಗೆ ಮುಂಚಿತವಾಗಿ ನಾನು ಚೆನ್ನೈಗೆ ತೆರಳುವ ಯೋಜನೆಯನ್ನು ಹೊಂದಿದ್ದೆ ಆದರೆ ಚೆನ್ನೈನಲ್ಲಿನ ಪ್ರಸ್ತುತ ಸ್ಥಿತಿ ತೀರಾ ವಿಕೋಪದಲ್ಲಿದ್ದು ಇದೀಗ ಯೋಜನೆ ಮುಂದೂಡಿದ್ದೇನೆ. ” ಸಂಯುಕ್ತಾ  ತಮಿಳು ಚಿತ್ರಕ್ಕೆ ಸಹಿ ಹಾಕುವ ಸುಳಿವು ನೀಡಿದ್ದಾರೆ.

“ತುರ್ತು ನಿರ್ಗಮನ” ಚಿತ್ರದಲ್ಲಿ ತೆರೆಮೇಲೆ ಬರಲಿರುವ ಸಂಯುಕ್ತಾ ಬೇರೆ ಯಾವುದೇ ಕನ್ನಡ ಯೋಜನೆಗಳಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ಕೇಳಲಾಗಿದ್ದ ಪ್ರಶ್ನೆಗೆ “ಒಳ್ಳೆಯ ಕಥೆ ನನ್ನ ಬಳಿ ಸಿಕ್ಕಿದರೆ ನಾನು ಕನ್ನಡ ಚಲನಚಿತ್ರಗಳನ್ನು ಮಾಡಲು ಇಷ್ಟಪಡುತ್ತೇನೆ. ಒಬ್ಬ ನಟಿಯಾಗಿ ನಾನು ಕೆಲಸ ಮಾಡಲು ಪ್ರಾರಂಭಿಸಿದ ಭಾಷೆಯಲ್ಲಿ ಬೆಳೆಯಲು ಇಷ್ಟಪಡುತ್ತೇನೆ ನಾನು ಇಲ್ಲಿನವಳೇ ಆಗಿದ್ದು ಇಲ್ಲಿಂದ ಇತರ ನಟ ನಟಿಯರಿಗಿಂತ  ಕನ್ನಡವನ್ನು ಹೆಚ್ಚು ನಿರರ್ಗಳವಾಗಿ ಮಾತನಾಡಬಲ್ಲೆ. ” ಅವರು ಹೇಳಿದ್ದಾರೆ.

ಬೈಕ್ ಸವಾರಿ ಮಡುವುದರಿಂದ ಹಿಡಿದು ಮಳೆಯಲ್ಲಿ ಡ್ಯಾನ್ಸ್ ಮಾಡುವವರೆಗೆ ಅವರು ಅನೇಕ ಹವ್ಯಾಸ ಹೊಂದಿದ್ದಾರೆ. “ನನಗೆ ಉತ್ತಮ ಕೆಲಸ ನೀಡುವ ಇತರ ಇಂಡಸ್ಟ್ರಿಗಳಿದೆ.  ಅವರು ಕಲೆ ಮತ್ತು ನನ್ನ ಕೌಶಲ್ಯಗಳನ್ನು ಮೆಚ್ಚುತ್ತಾರೆ ಎಂದು ನನಗೆ ಸಂತೋಷವಾಗಿದೆ. ನಮ್ಮ ಕನ್ನಡದವರೂ ಇದನ್ನು ಮಾಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ.” ನಟಿ ನುಡಿದ್ದಾರೆ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×