ಮೂಡುಬಿದಿರೆ: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾಕಾಶಿ ಹಾಗೂ ಜೈನ ಕಾಶಿ ಮೂಡುಬಿದಿರೆಗೆ ಇದೇ 27ರಂದು ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭ ಮೂಡುಬಿದಿರೆಯಲ್ಲಿ ಅನೇಕ ಹೋಸ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಇದೇ ಏಪ್ರಿಲ್ ತಿಂಗಳ 27 ರಂದು ಮಂಗಳೂರಿನಿಂದ ಮೂಡುಬಿದಿರೆಗೆ ಆಗಮಿಸಿ ಸಾವಿರ ಕಂಬದ ಬಸದಿ ಭೇಟಲಿದ್ದಾರೆ.
ಪ್ರಮುಖವಾಗಿ 145.48 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಲಜೀವನ್ ಮಿಷನ್ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ. ಜೊತೆಗೆ 10 ಕೋಟಿ ರೂ ವೆಚ್ಚದ ನೂತನ ತಾಲೂಕು ಆಡಳಿತ ಸೌಧ ಸೇರಿದಂತೆ 25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ,
4 ಕೋಟಿ ಮೊತ್ತದ ಪ್ರವಾಸಿ ಬಂಗಲೆ ಸಹಿತ ಒಟ್ಟು 370 ಕೋಟಿ ರೂಪಾಯಿ ಪ್ರಗತಿ ಕಾರ್ಯಗಳಿಗೆ ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿ ಭೇಟಿ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಾರಣ ಮೂಲ್ಕಿ-ಮೂಡುಬಿದಿರೆ ವಿಧಾನಸಭೆ ಕ್ಷೇತ್ರದ ಶಾಸಕರಾದ ಉಮನಾಥ ಕೋಟ್ಯಾನ್ ಸಿಎಂ ಪ್ರವಾಸಕ್ಕೆ ಪೂರಕ ಸಿದ್ಧತೆಗಳನ್ನು ನಡೆಸಿದ್ದಾರೆ.
ಮುಖ್ಯಮಂತ್ರಿ ಜೊತೆ ಸಚಿವ ಸಿಸಿ ಪಾಟೀಲ್, ವಿ. ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ, ಡಾ.ಅಶ್ವಥ ನಾರಾಯಣ, ಬಿ.ಸಿ ನಾಗೇಶ್, ಸಂಸದ ನಳಿನ್ ಕುಮಾರ್ ಕಟೀಲು ಪಾಲ್ಗೊಳ್ಳಲಿದ್ದಾರೆ.
Follow us on Social media