ಮಂಗಳೂರು : ಮಹೇಂದ್ರ ಕುಮಾರ್ ನಿರ್ದೇಶನದ ತುಳು ಸಿನಿಮಾ ಕಾರ್ನಿಕದ ಕಲ್ಲುರ್ಟಿ ಎಪ್ರಿಲ್ 3 ರಂದು ತೆರೆಕಾಣಲಿದೆ.
ಈ ಸಿನಿಮಾದ ಚಿತ್ರೀಕರಣವು ಕಾರ್ಕಳದ ಸುತ್ತಮುತ್ತಲಿನ ಪ್ರದೇಶದಲ್ಲಿ 70 ದಿನಗಳ ಕಾಲ ನಡೆದಿದೆ.ಈ ಸಿನಿಮಾದ ಕುರಿತಾಗಿ ಮಾತನಾಡಿದ ಸಿನಿಮಾದ ನಿರ್ಮಾಪಕ, “ಇದೊಂದು ಚಾರಿತ್ರಿಕ ಸಿನಿಮಾ. ಈ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿದ್ದು ಸಿನಿಮಾ ಪ್ರಿಯರಿಗೆ ಮನರಂಜನೆ ನೀಡಲಿದೆ” ಎಂದು ತಿಳಿಸಿದ್ದಾರೆ.ಫೆನೋಕ್ಸ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾವು ಕಲ್ಲುರ್ಟಿ ದೈವದ ಕಥೆಯಾಗಿದೆ. ಈ ಸಿನಿಮಾಕ್ಕೆ ನಿರ್ದೇಶಕ ಮಹೇಂದ್ರ ಕುಮಾರ್ ಅವರೇ ಕಥೆ ಬರೆದಿದ್ದು, ಗಂಗಾಧರ್ ಕಿರೋಡಿಯನ್ ಅವರು ಸಂಭಾಷಣೆ ಹಾಗೂ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಹಿತೇನ್ ಹಾಸನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಉಮಾಪತಿಯವರು ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ.ಶೈಲೇಂದ್ರ ಡಿ.ಜೆ. ಚಾಂದಿನಿ ಅಂಚನ್, ಮಹೇಂದ್ರ ಕುಮಾರ್, ಶಾಲಿನಿ ಮರ್ಕಡ ಹಾಗೂ ಮೊದಲಾದ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Follow us on Social media