ಉಡುಪಿ : ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು ಒಟ್ಟಾರೆ ಶೇಕಡಾ 71 .81 ಫಲಿತಾಂಶ ಈ ಬಾರಿ ಬಂದಿದೆ. ಈ ಬಾರಿ ಚಿಕ್ಕ ಬಳ್ಳಾಪುರ ಪ್ರಥಮ ಸ್ಥಾನ ಗಳಿಸಿದ್ದು ಉಡುಪಿ 7 ನೇ ಸ್ಥಾನಕ್ಕೆ ಜಾರಿದೆ ಹಾಗು ದಕ್ಷಿಣ ಕನ್ನಡ ಜಿಲ್ಲೆ 12 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ, 625 ಕ್ಕೆ 625 ಅಂಕ ಪಡೆದು 6 ಮಂದಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ..
ಸೋಮವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶ ಪ್ರಕಟಿಸಿದ್ದಾರೆ. ಮಧ್ಯಾಹ್ನ 3 ಗಂಟೆ ನಂತರ ಇಲಾಖೆ ವೆಬ್‍ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಜುಲೈ 3ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದಿದ್ದು, ಕೊರೊನಾ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆಸಿ, ಸರ್ಕಾರ ಸಾಹಸ ಮಾಡಿದಂತಾಗಿತ್ತು ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನವನ್ನು ಸಹ ಅಷ್ಟೇ ವೇಗವಾಗಿ ಮುಗಿಸಲಾಗಿದೆ. ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಫಲಿತಾಂಶ ಲಭ್ಯವಾಗೋ ವೆಬ್ ಸೈಟ್ ವಿವರ www.kseeb.kar.nic.in ಹಾಗೂ www.karresults.nic.in ವೆಬ್‍ಸೈಟ್‍ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶ ನೋಡಬಹುದಾಗಿದೆ. ಅಲ್ಲದೆ ಪೋಷಕರ ಮೊಬೈಲ್‍ಗೆ ಫಲಿತಾಂಶದ ಎಸ್‍ಎಂಎಸ್ ಸಹ ಬರಲಿದೆ.
Follow us on Social media