Breaking News

ಎಲ್ಲ ಮಾದರಿಯ ಕ್ರಿಕೆಟ್‍ಗೆ ವಾಸಿಮ್ ಜಾಫರ್ ಗುಡ್ ಬೈ

ನವದೆಹಲಿ : ಕ್ರಿಕೆಟ್‌ನ ನಿರ್ವಿವಾದ ರಾಜ, ರಣಜಿ ಟ್ರೋಫಿಯ ಸ್ಟಾರ್ ಬ್ಯಾಟ್ಸ್ ಮನ್ ಮುಂಬೈನ ವಾಸಿಮ್ ಜಾಫರ್ ಶನಿವಾರ ಎಲ್ಲಾ ರೀತಿಯ ಕ್ರಿಕೆಟ್‌ ‍ಗೆ ನಿವೃತ್ತಿ ಘೋಷಿಸಿದ್ದಾರೆ.

ಜಾಫರ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಸರಾಸರಿ 50.67 ಸರಾಸರಿಯಲ್ಲಿ 260 ಪಂದ್ಯಗಳಲ್ಲಿ 19410 ರನ್ ಗಳಿಸಿದ್ದು, ಇದರಲ್ಲಿ 57 ಶತಕಗಳು ಮತ್ತು 91 ಅರ್ಧಶತಕ ಒಳಗೊಂಡಿವೆ. ಅವರು ಬಾರಿಸಿದ್ದ ಅಜೇಯ 314 ಗರಿಷ್ಠ ರನ್ ಆಗಿದೆ. ಅಲ್ಲದೆ 299 ಕ್ಯಾಚ್ ಗಳನ್ನು ತೆಗೆದುಕೊಂಡಿದ್ದಾರೆ. 118 ಎ ದರ್ಜೆ ಪಂದ್ಯಗಳಲ್ಲಿ ಜಾಫರ್ 4849 ರನ್ ಮತ್ತು 23 ಟಿ 20 ಪಂದ್ಯಗಳಲ್ಲಿ 616 ರನ್ ಗಳಿಸಿದ್ದಾರೆ.

ಭಾರತಕ್ಕಾಗಿ 31 ಟೆಸ್ಟ್ ಮತ್ತು ಎರಡು ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಕ್ರಮವಾಗಿ 1944 ರನ್ ಮತ್ತು 10 ರನ್ ಗಳಿಸಿದ್ದಾರೆ. ಫೆಬ್ರವರಿ 2000 ರಲ್ಲಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಾಫರ್ ಭಾರತಕ್ಕಾಗಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದರು. ಮತ್ತು ಅವರ ಕೊನೆಯ ಟೆಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧ ಏಪ್ರಿಲ್ 2008 ರಲ್ಲಿ ಕಾನ್ಪುರದಲ್ಲಿ ಆಡಿದ್ದರು. ಜಾಫರ್ ಟೆಸ್ಟ್‌ನಲ್ಲಿ ಐದು ಶತಕ ಮತ್ತು 11 ಅರ್ಧಶತಕಗಳನ್ನು ಸಿಡಿದ್ದಾರೆ.

ಈ ಋತುವಿನಲ್ಲಿ ವಿದರ್ಭ ಪರ ರಣಜಿ ಟ್ರೋಫಿ ಆಡಿದ ಜಾಫರ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ನಾಗ್ಪುರದಲ್ಲಿ ನಡೆದ ತಮ್ಮ ಕೊನೆಯ ರಣಜಿ ಪಂದ್ಯದಲ್ಲಿ ಕೇರಳ ವಿರುದ್ಧ 57 ರನ್ ಗಳಿಸಿದ್ದರು. ಈ ಋತುವಿನಲ್ಲಿ ದೆಹಲಿ ವಿರುದ್ಧ ಜಾಫರ್ 83 ಮತ್ತು 40 ರನ್ ಮತ್ತು ರಾಜಸ್ಥಾನ್ ವಿರುದ್ಧ 60 ರನ್ ಗಳಿಸಿದ್ದರು.

ನಿವೃತ್ತಿಯ ಬಗ್ಗೆ ಮಾತನಾಡಿರುವ ಜಾಫರ್, “25 ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್ ಆಡಿದ ನಂತರ, ಆಟಕ್ಕೆ ವಿದಾಯ ಹೇಳುವ ಸಮಯ ಬಂದಿದೆ” ಎಂದು ಹೇಳಿದರು. ಬಿಸಿಸಿಐ, ಮುಂಬೈ ಕ್ರಿಕೆಟ್ ಅಸೋಸಿಯೇಷನ್, ವಿದರ್ಭ ಕ್ರಿಕೆಟ್ ಅಸೋಸಿಯೇಷನ್, ನನ್ನ ತಂಡದ ಸದಸ್ಯರು, ಮಾಧ್ಯಮ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ತಂದೆ ತನ್ನ ಮಗನೊಬ್ಬ ಭಾರತಕ್ಕಾಗಿ ಆಡಬೇಕೆಂದು ಬಯಸಿದ್ದರು. ಭಾರತ ಪರ ಆಡುವ ಮೂಲಕ ನನ್ನ ತಂದೆಯ ಕನಸನ್ನು ಈಡೇರಿಸಿದ್ದೇನೆ. ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಮತ್ತು ನಾನು ಆಟದ ಎಲ್ಲಾ ಮೂರು ಸ್ವರೂಪಗಳಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

“ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳು ಪಾಕಿಸ್ತಾನದ ವಿರುದ್ಧ 202 ಮತ್ತು ವೆಸ್ಟ್ ಇಂಡೀಸ್ ವಿರುದ್ಧ 212 ರನ್ ಗಳಿಸಿದ್ದಾಗಿದೆ. 2006-07ರಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯನ್ನು ಗೆದ್ದಿರುವುದು ನನಗೆ ಬಹಳ ಸ್ಮರಣೀಯ. ರಾಹುಲ್ ದ್ರಾವಿಡ್, ಸೌರಭ್ ಗಂಗೂಲಿ, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಂತವರ ಜೊತೆ ನಾನು ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಂಡಿರುವುದು ನನಗೆ ದೊಡ್ಡ ಗೌರವವಾಗಿದೆ” ಎಂದಿದ್ದಾರೆ.

Source : UNI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×