ನವದೆಹಲಿ: ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಹಾಗೂ ಮಾಜಿ ಟೀಂ ಇಂಡಿಯಾ ವೇಗಿ ಯೂಸೂಫ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಇಬ್ಬರೂ ಆಟಗಾರರು ಟ್ವೀಟ್ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಯೂಸೂಫ್ ಪಠಾಣ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಇನ್ನು 2012ರಲ್ಲಿ ಏಕದಿನ ಮತ್ತು ಟಿ20 ಕೊನೆಯ ಪಂದ್ಯವಾಡಿದ್ದರು.
57 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಪಠಾಣ್ 810 ರನ್ ಬಾರಿಸಿದ್ದಾರೆ. 123 ಗರಿಷ್ಠ ಮೊತ್ತವಾಗಿದೆ. ಬೌಲಿಂಗ್ ನಲ್ಲೂ ಮಿಂಚಿದ್ದು 33 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 22 ಟಿ20 ಪಂದ್ಯಗಳನ್ನಾಡಿರುವ ಅವರು 236 ರನ್ ಬಾರಿಸಿದ್ದಾರೆ.
2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ವಿನಯ್ ಕುಮಾರ್ 31 ಏಕದಿನ ಪಂದ್ಯಗಳನ್ನಾಡಿದ್ದಾರೆ. 48 ವಿಕೆಟ್ ಪಡೆದಿದ್ದಾರೆ. ಇನ್ನು 9 ಟಿ20 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು. ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿದ್ದು 1 ವಿಕೆಟ್ ಪಡೆದಿದ್ದರು.
Follow us on Social media