ಪ್ಯೊಂಗ್ಯಾಂಗ್: ಕಳೆದ 20 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಹಲವು ಊಹಾ ಪೋಹಗಳಿಗೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತೆರೆ ಎಳೆದಿದ್ದಾರೆ.
ಶುಕ್ರವಾರ ನಡೆದ ಕೆಮಿಕಲ್ ಕಾರ್ಖಾನೆ ಉದ್ಘಾಟನೆಯಲ್ಲಿ ಕಿಮ್ ಜಾಂಗ್ ಭಾಗವಹಿಸಿದ್ದರು ಎಂದು ಕೆಸಿಎನ್ ಎ ವರದಿ ಮಾಡಿದೆ.
ತಮ್ಮ ಸಹೋದರಿ ಕಿಮ್ ಯೋ ಜಾಂಗ್ ಜೊತೆ ಸುಂಜಾನ್ ಫೋಸ್ಪೇಟಿಕ್ ಫರ್ಟಿಲೈಸರ್ ಎಂಬ ಕಾರ್ಖಾನೆಯ ರಿಬ್ಬನ್ ಕಟ್ಟಿಂಗ್ ಕಾರ್ಯಕ್ರಮದಲ್ಲಿ ಕಿಮ್ ಪಾಲ್ಗೋಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.
ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಆಗಮಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ತಮ್ಮ ಸರ್ವೋಚ್ಚ ನಾಯಕನನ್ನು ನೋಡಿ ಅಲ್ಲಿ ಭಾಗವಹಿಸಿದವರೆಲ್ಲಾ ಹುರ್ರೇ ಎಂದು ಘೋಷಣೆ ಕೂಗಿದರು ಎಂದು ಕೆಸಿಎನ್ ಎ ತಿಳಿಸಿದೆ
Source : IANS
Follow us on Social media