ಉಳ್ಳಾಲ: ಮಾವಿನಕಾಯಿ ಕೀಳಲು ಮರಹತ್ತಿದ ಯುವಕನೋರ್ವ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಸಂಜೆ ವೇಳೆ ಸಂಭವಿಸಿದೆ.
ಮಹಮ್ಮದ್ ಇಲಿಯಾಸ್ (21) ಸಾವನ್ನಪ್ಪಿದವರು. ಸಂಜೆ ವೇಳೆ ಮನೆ ಸಮೀಪದ ಕಂಪೌಂಡಿನಲ್ಲಿರುವ ಮಾವಿನಮರಕ್ಕೆ ಹಣ್ಣು ಕೀಳಲೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ.
ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಮಾವಿನ ಮರದ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದರೂ ಅದನ್ನು ಕಟಾವು ನಡೆಸದೆ ಘಟನೆ ನಡೆದಿರುವುದಾಗಿ ಆರೋಪಿಸಿದ್ದಾರೆ.
Follow us on Social media