Breaking News

ಉಪ್ಪಿನಂಗಡಿ: ಹೊಳೆಗೆ ಬಿದ್ದ ಪಿಕಪ್- ಅಪಾಯದಿಂದ ಪಾರಾದ ಚಾಲಕ

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೀರಕಟ್ಟೆ ಸಮೀಪ ನಡೆದಿದೆ.

ಪಿಕಪ್ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಆದರೆ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಕೊಲ್ಪೆ ನಿವಾಸಿ ಆರಿಫ್ ಎಂಬವರು ಪಿಕಪನ್ನು ಚಲಾಯಿಸಿಕೊಂಡು ಬರುತ್ತಿದ್ದರು.

ಪಿಕಪ್ ನೀರಿನಲ್ಲಿ ಉರುಳುತ್ತಾ ಸ್ವಲ್ಪದೂರ ಸಾಗಿದ್ದು, ಸ್ಥಳೀಯರ ಸಹಕಾರದಿಂದ ಅದನ್ನು ಮೇಲೆತ್ತಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×