ಉಡುಪಿ: ಶಾಂಭವಿ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ದಾಳಿ ನಡೆಸಿದ ಉಡುಪಿ ನಗರ ಮಹಿಳಾ ಠಾಣಾ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ.
ಎರ್ಮಾಳ್ ನಿವಾಸಿ ಜಯಂತ್ ಸಾಲಿಯಾನ್ (46) ಮತ್ತು ಹೆಬ್ರಿ ನಾಡ್ಪಾಲು ನಿವಾಸಿ ದಿನೇಶ್ (42) ಎಂದು ಬಂಧಿತ ಆರೋಪಿಗಳು. ಬಂಧಿತರಿಂದ 4 ಮೊಬೈಲ್ ಪೋನ್ , 5,600 ರೂ. ನಗದು ಸ್ವಾಧೀನಪಡಿಸಿಕೊಂಡಿದ್ದಾರೆ.
ಶೇಖರ್, ಜಯಂತ್ ಮತ್ತು ದಿನೇಶ್ ಎಂಬವರು ಸೇರಿಕೊಂಡು ನೊಂದ ಮಹಿಳೆಯನ್ನು ಲಾಡ್ಜ್ ನ ರೂಮಿನಲ್ಲಿರಿಸಿಕೊಂಡು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow us on Social media