ಉಡುಪಿ: ಆಟೋ ರಿಕ್ಷಾ ಹಾಗೂ ನೀರಿನ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಫ್ರಾನ್ಸ್ ದೇಶದ ದಂಪತಿ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯ ಸಿಟಿಜನ್ ಸರ್ಕಲ್ ಬಳಿ ಇಂದು ಸಂಜೆ ವೇಳೆ ನಡೆದಿದೆ.
ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ಈ ದಂಪತಿ ಉಡುಪಿಯ ಮಲ್ಪೆ ಸಿಟಿಜನ್ ಸರ್ಕಲ್ ಬಳಿ ಆಟೋದಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಎದುರಿನಿಂದ ಬಂದ ನೀರಿನ ಟ್ಯಾಂಕರ್ ಆಟೋಗೆ ಢಿಕ್ಕಿ ಹೊಡೆದಿದೆ. ಪರಿಣಾಮ, ಆಟೋ ಡ್ರೈವರ್ ಹಾಗೂ ಹಿಂದೆ ಕುಳಿತಿದ್ದ ಫ್ರಾನ್ಸ್ ದಂಪತಿ ಗಂಭೀರ ಗಾಯಗೊಂಡಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಈಶ್ವರ್ ಮಲ್ಪೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ತೀವ್ರತೆಗೆ ಆಟೋ ನಜ್ಜುಗುಜ್ಜಾಗಿದ್ದು, ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media