ಉಡುಪಿ : ಕರಾವಳಿ ಭಾಗದಲ್ಲಿ ತಲ್ಲಣ ಮೂಡಿಸಿದ ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಸೂತ್ರದಾರ ಜ್ಯೋತಿಷಿ ನಿರಂಜನ್ ಭಟ್ (30) ಗೆ ಉಡುಪಿ ಜಿಲ್ಲಾ ನ್ಯಾಯಾಲಯ ತಂದೆ ಮೃತಪಟ್ಟ ಹಿನ್ನಲೆಯಲ್ಲಿ ಜು.7 ರವರೆಗೆ ಷರತ್ತುಬದ್ದ ಮಧ್ಯಂತರ ಜಾಮೀನು ನೀಡಿದೆ.
ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ 3 ನೇ ಆರೋಪಿ ಜ್ಯೋತಿಷಿ ನಿರಂಜನ್ ಭಟ್ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಆರೋಪಿ ಜ್ಯೋತಿಷಿ ನಿರಂಜನ್ ಭಟ್ ಅವರ ತಂದೆ ಹಾಗೂ ಇದೇ ಪ್ರಕರಣದ ನಾಲ್ಕನೆಯ ಆರೋಪಿಯಾಗಿದ್ದ ಶ್ರೀನಿವಾಸ್ ಭಟ್ (65) ಅವರು ಕಳೆದೆರಡು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಂದೆಯ ಉತ್ತರಕ್ರಿಯೆಯ ಕಾರ್ಯವನ್ನು ನೆರವೇರಿಸಲು ಜಾಮೀನು ನೀಡಬೇಕು ಎಂದು ನಿರಂಜನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ ಐದು ಲಕ್ಷ ರೂ. ಬಾಂಡ್ ಪಡೆದು ಏಳು ದಿನಗಳ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಪ್ರಕರಣ ನಾಲ್ಕನೇ ಆರೋಪಿಯಾಗಿದ್ದ ಮೃತ ಶ್ರೀನಿವಾಸ್ ಭಟ್ , ಹಾಗೂ ಚಾಲಕ ರಾಘವೇಂದ್ರ ಎಂಬಾತ ಬಂಧಿತನಾಗಿದ್ದರೂ ಆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಈ ಹಿಂದೆ ಬಂಧಿತನಾಗಿದ್ದ ವೇಳೆ ನಿರಂಜನ್ ಭಟ್ ವಜ್ರದ ಉಂಗುರ ನುಂಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.
Follow us on Social media