ಉಡುಪಿ: ಅನ್ನಭಾಗ್ಯ ಅಕ್ಕಿಯನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಲಾರಿ ಹಾಗೂ ಅಕ್ಕಿ ಸಹಿತ ವಶಪಡಿಸಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.
ಲಾರಿ ಮಾಲೀಕರಾದ ಮಹಮ್ಮದ್ ಸಮೀರ್ ಮತ್ತು ಸುನೀಲ್ ಸೇರಿದಂತೆ ಮೂವರು ಬಂಧಿತ ಆರೋಪಿಗಳು.
ಬೆಂಗಳೂರು ಮೂಲದ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 16,000 ಕೆ.ಜಿ ಅಕ್ಕಿಯನ್ನು ಬೈಂದೂರು ಠಾಣೆಯ ಡಿ.ವೈ.ಎಸ್.ಪಿ ಶ್ರೀಕಾಂತ್ ಹಾಗೂ ಪಿ.ಎಸ್.ಐ ಪವನ್ ನಾಯಕ್ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಸಹಿತ ಲಾರಿಯನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

