ಉಡುಪಿ : ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ನಡೆದ ಓವನ್ ಸ್ಪೋಟದಿಂದ ಬೇಕರಿ ಮಾಲೀಕ ಸಾವಿಗೀಡಾದ ದಾರುಣ ಘಟನೆ ಆ. 10 ರ ಸೋಮವಾರ ಬೆಳಗ್ಗೆ ಮಾಬುಕಳದಲ್ಲಿ ನಡೆದಿದೆ.
ಮೃತ ಬೇಕರಿಯ ಮಾಲೀಕ ರಾಬರ್ಟ್ ಪುಟಾರ್ಡೋ (53) ಎಂದು ಗುರುತಿಸಲಾಗಿದೆ.
ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕ ರುಚಿ ಪ್ಯಾಕ್ಟರಿಯಲ್ಲಿ ದೊಡ್ಡ ಗಾತ್ರದ ಓವನ್ ಸ್ಪೋಟದಿಂದ ಈ ಅವಘಡ ಸಂಭವಿಸಿದ್ದು , ಬೇಕರಿಯ ಮಾಲೀಕ ರಾಬರ್ಟ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇವರು ಓವನ್ ನ ನಿರ್ವಹಣೆ ಗೆಂದು ಸಮೀಪಕ್ಕೆ ತೆರಳಿದಾಗಲೇ ಓವನ್ ಸ್ಪೋಟಗೊಂಡಿದ್ದು, ಓವನ್ ನ ಬಾಗಿಲು ಬಡಿದು ದೇಹ ಸಂಪೂರ್ಣ ಛಿದ್ರವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಸ್ಥಳಕ್ಕೆ ಕೋಟ ಪೊಲೀಸರು ಧಾವಿಸಿದ್ದಾರೆ.
Follow us on Social media