ಕೋಟ : ಕುಂದಾಪುರ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಮಿಸ್ರಿಯಾ (19 ವರ್ಷ ) ಜೀವನದಲ್ಲಿ ಜಿಗುಪ್ಸೆ ಹೊಂದಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 27ರಂದು ನಡೆದಿದೆ.
- ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಗ್ರಾಮದ ನಿವಾಸಿ ದಿ. ಶಾಬು ಸಾಹೇಬ್‌ರ 2ನೇ ಮಗಳು ಮಿಸ್ರಿಯಾ ಕುಂದಾಪುರ ಬ್ಯಾರೀಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡಿಕೊಂಡಿದ್ದು ಎಂದಿನಂತೆ ಜೂನ್ 27 ರಂದು ಬೆಳಿಗ್ಗೆ ಕಾಲೇಜಿಗೆ ತೆರಳಿ ಸಂಜೆ 5 ಗಂಟೆಗೆ ಹಿಂತಿರುಗಿ ತಲೆನೋವು ಇದೆ ಎಂದು ಹೇಳಿ ಕೋಣೆಗೆ ಹೋಗಿ ಮಲಗಿದ್ದಾಳೆ.ಸಂಜೆ 7 ಗಂಟೆಗೆ ಅವರ ಸಂಬಂಧಿ ಸಯ್ಯದ್ ಬ್ಯಾರಿ ಮತ್ತು ಅವರ ಕಿರಿಯ ಮಗಳು ಕೋಣೆಯ ಬಾಗಿಲು ತೆರೆದು ನೋಡಿದಾಗ ಕೋಣೆಯಲ್ಲಿ ತಲೆನೋವು ಎಂದು ಮಲಗಿದ್ದ ಮಿಸ್ರಿಯಾಳು ಮನೆಯ ಮಾಡಿನ ಮರದ ಪಕ್ಕಾಸಿಗೆ, ಮಕ್ಕಳು ಮಲಗಲು ಈ ಮೊದಲೇ ಹಾಕಿದ್ದ ಜೋಲಿಯಲ್ಲಿಯೇ ನೇಣು ಕುಣಿಕೆ ಮಾಡಿ ಕುತ್ತಿಗೆಗೆ ಬಿಗಿದು ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿರುತ್ತಾಳೆ ಎಂದು ದೂರಿನಲ್ಲಿ ದಾಖಲಾಗಿದೆ.ಇಬ್ಬರು ಸೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಗ ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಮಿಸ್ರಿಯಾ ಯಾವುದೋ ಕಾರಣಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.