ಉಡುಪಿ: ದೇಶದಲ್ಲಿ ಹಿಂದೂಗಳು ಮತಾಂತರ ಆಗಲು ನಮ್ಮ ಮೇಲು ಕೀಳು ಹಾಗೂ ಬಡತನವೇ ಕಾರಣ ಎಂದು ಚಿಕ್ಕಮಗಳೂರು ಗೌರಿಗದ್ದೆಯ ಅವಧೂತ್ ವಿನಯ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
ಸಮಾರಂಭವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮತಾಂತರ ಆಗಲು ನಾವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದೂ ಧರ್ಮ ಕಳೆದು ಹೋಗಲು ನಮ್ಮೊಳಗಿನ ಮೇಲು ಕೀಳು ಎಂಬ ಭಾವನೆ ಕಾರಣವಾಗಿದೆ.
ಎರಡು ಕಾರಣದಿಂದ ಮತಾಂತರ ಆಗುತ್ತಿದೆ. ಒಂದು ನಮ್ಮೊಳಗಿನ ಮೇಲು ಕೀಳು, ಮತ್ತೊಂದು ಬಡತನ. ಇದು ಮತಾಂತರವಾಗಲು ಕಾರಣ. ಯಾರೋ ಒಬ್ಬರನ್ನು ದೇವಸ್ಥಾನದಿಂದ ಹೊರ ತಳ್ಳಿದಾಗ ಅವರನ್ನು ಇನ್ನೊಂದು ಧರ್ಮದಲ್ಲಿ ಸ್ವಾಗತ ಮಾಡುತ್ತಾರೆ.
ಇನ್ನೊಂದು ಧರ್ಮದಲ್ಲಿ ಸಮಾನತೆ ಇದೆ ಎಂದಾಗ ಸಹಜವಾಗಿ ಅ ಧರ್ಮಕ್ಕೆ ಹೋಗುತ್ತಾರೆ ಎಂದರು. ಮೊದಲು ನಮ್ಮ ತೊಡಕನ್ನು ನಾವು ಸರಿ ಮಾಡಬೇಕು ಎಂದವರು ನುಡಿದರು.
Follow us on Social media