ಉಡುಪಿ : ಇಲ್ಲಿನ ಸಂತೆಕಟ್ಟೆ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಜೂನ್ 18ರ ಗುರುವಾರ ನಡೆದಿದೆ.
ಮೃತರನ್ನು ಕುಂದಾಪುರದ ಮೂಲದ ಬಾಲ್ಕೂರು ಕಂದಾವರ ದಿನೇಶ್ (35) ಹಾಗೂ ಮಂಜುನಾಥ್ (21) ಎಂದು ಗುರುತಿಸಲಾಗಿದೆ
ಮೂಲಗಳ ಪ್ರಕಾರ, ಇವರಿಬ್ಬರು ಟೆಂಪೋ ಟ್ರಾಕ್ಸ್ ನಲ್ಲಿ ಕುಂದಾಪುರದಿಂದ ಉಡುಪಿಗೆ ತರಕಾರಿ ಸಾಗಿಸುತ್ತಿದ್ದು, ವಾಹನ ಚಾಲನೆ ಮಾಡುತ್ತಿದ್ದ ದಿನೇಶ್ ಏಕಾಏಕಿ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಹಿನ್ನಲೆಯಲ್ಲಿ ಟೆಂಪೋ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಇವರಿಬ್ಬರನ್ನು ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಮಂಜುನಾಥ್ ಕಳೆದ ಕೆಲವು ತಿಂಗಳುಗಳಿಂದ ದಿನೇಶ್ ಅವರೊಂದಿಗೆ ತರಕಾರಿ ಸಾಗಾಟದ ಕೆಲಸ ಮಾಡುತ್ತಿದ್ದರು. ಬಡ ಕುಟುಂಬಕ್ಕೆ ಸೇರಿದ ಅವರು ಪದವಿ ಮುಗಿದ ನಂತರ ಅರೆಕಾಲಿಕ ಕೆಲಸ ಮಾಡುತ್ತಿದ್ದುಇವರೊಬ್ಬರು ಅತ್ಯುತ್ತಮ ವಾಲಿಬಾಲ್ ಆಟಗಾರ ಎಂದು ಹೇಳಲಾಗಿದೆ.
Follow us on Social media