ಉಡುಪಿ : ಜಿಲ್ಲೆಯಲ್ಲಿ ಬುಧವಾರ ಸೋಂಕಿತಾ ಸಂಖ್ಯೆ ಹೆಚ್ಚಳವಾಗಿದ್ದು, ಒಂದೇ ದಿನ ನೂರರ ಗಡಿದಾಟಿದೆ. ಬುಧವಾರದಂದು 109 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಹಲವು ದಿನಗಳ ನಂತರ ಬುಧವಾರದಂದು ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕು ನಿಯಂತ್ರಣದಲ್ಲಿತ್ತು. ಇದೀಗ ಮತ್ತೆ ಏರಿಕೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 1895ಕ್ಕೆ ಏರಿಕೆಯಾಗಿದೆ.
ಈ ನಡುವೆ ಜಿಲ್ಲೆಯಲ್ಲಿ ಬುಧವಾರದಂದು 80 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ, ಇಂದು 489 ಮಂದಿಯ ವರದಿ ನೆಗೆಟಿವ್ ಬಂದಿದೆ. 594 ಮಂದಿಯ ವರದಿಗಳು ಇನ್ನಷ್ಟೇ ಲಭಿಸಬೇಕಿದೆ ಎಂಬುವುದಾಗಿ ಜಿಲ್ಲಾ ಆರೊಗ್ಯಾಧಿಕಾರಿ ಡಾ. ಸುಧಿರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.
Follow us on Social media