ಉಡುಪಿ: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನಾಭರಣವಿದ್ದ ಬ್ಯಾಗ್ ಒಂದನ್ನು ಉದ್ಯಮಿಯೋರ್ವರು ವಾಪಸ್ ಮರಳಿಸಿ ಪ್ರಾಮಾಣಿಕತೆ ಮರೆದಂತಹ ಘಟನೆ ಉಡುಪಿಯ ಕಾಪುವಿನಲ್ಲಿ ನಡೆದಿದೆ.
ಶಿರ್ವ ಮೂಲದ ಅನ್ಸಿರಾ ಬಾನು ಅವರ ಚಿನ್ನಾಭರಣ ಕಳೆದುಕೊಂಡ ಮಹಿಳೆಯಾಗಿದ್ದು, ಶಂಕರಪುರದ ಮೋನಿಸ್ ಚಿನ್ನಾಭರಣ ವಾರುಸುದಾರರಿಗೆ ಮರಳಿಸಿ ಎಲ್ಲರ ಪ್ರಾಮಾಣಿಕತೆಗೆ ಪಾತ್ರರಾದ ಉದ್ಯಮಿಯಾಗಿದ್ದಾರೆ.
ಮೋನಿಸ್ ಅವರು ಕೆನ್ಯೂಟ್ ಬೈಕ್‌ನಲ್ಲಿ ಕಟಪಾಡಿ – ಶಿರ್ವ ನಡುವಿನ ಚೊಕ್ಕಾಡಿಯಾಗಿ ಪ್ರಯಾಣಿಸುತ್ತಿದ್ದಾಗ ರೈಲ್ವೇ ಸೇತುವೆಯ ಬಳಿ 40 ಪವನ್ ಚಿನ್ನಾಭರಣ ವಿರುವ ಬ್ಯಾಗ್ ಸಿಕ್ಕಿತ್ತು. ತಕ್ಷಣ ಅವರು ಅದನ್ನು ಕಟಪಾಡಿ ಹೊರ ಠಾಣೆಗೆ ಮುಟ್ಟಿಸಿದ್ದರು.
ಇದೇ ವೇಳೆ ಚಿನ್ನಾಭರಣವಿದ್ದ ಬ್ಯಾಗ್ ಕಳೆದುಕೊಂಡಿದ್ದ ಅನ್ಸಿರಾ ಬಾನು ಮರಳಿ ಕಟಪಾಡಿಗೆ ಬಂದು ರಿಕ್ಷಾ ನಿಲ್ದಾಣದಲ್ಲಿ ವಿಚಾರಿಸುತ್ತಿದ್ದರು. ಅವರು ಮತ್ತು ಪೊಲೀಸರಿಗೆ ಚಿನ್ನದ ಬ್ಯಾಗ್ ಸಿಕ್ಕಿರುವ ಘಟನೆ ಕೂಡ ಏಕಸಮಯದಲ್ಲಿ ನಡೆದ ಕಾರಣ ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆಯಿಸಿ ಬ್ಯಾಗ್ ಬಗ್ಗೆ ಮಾಹಿತಿ ಪಡೆದರು.
ಮಹಿಳೆ ನೀಡಿದ ಮಾಹಿತಿ ಮತ್ತು ಬ್ಯಾಗ್‌ನಲ್ಲಿದ್ದ ವಸ್ತುಗಳು ಪರಸ್ಪರ ತಾಳೆಯಾಗಿದ್ದರಿಂದ ಪೊಲೀಸರು ಚಿನ್ನಾಭರಣವನ್ನು ಕೆನ್ಯೂಟ್ ಮೋನಿಸ್ ಅವರ ಉಪಸ್ಥಿತಿಯಲ್ಲಿ ಮಹಿಳೆಯ ಸಂಬಂಧಿಕರಿಗೆ ಮರಳಿಸಿದ್ದಾರೆ. ಮೋನಿಸ್ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
Follow us on Social media