Breaking News

ಉಡುಪಿ: ಕೊರೊನಾದಿಂದ 49 ವರ್ಷದ ವ್ಯಕ್ತಿ ಸಾವು – ಆರಕ್ಕೇರಿದ ಸಾವಿನ ಸಂಖ್ಯೆ

ಉಡುಪಿ : ಮಹಾಮಾರಿ ಕೊರೊನಾ ಉಡುಪಿಯಲ್ಲಿ ಜು.16 ರ ಗುರುವಾರ ಆರನೇ ಬಲಿ ಪಡೆದಿದೆ. ಮೃತರನ್ನು ಉಡುಪಿ ನಿವಾಸಿ 49 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಇವರು ಮಧುಮೇಹ ಮತ್ತು ಉಸಿರಾಟದ ಸಮಸ್ಯೆಗಳಂತಹ ಇತರ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. ಜುಲೈ 15 ರ ಬುಧವಾರ ರಾತ್ರಿ ಅವರ ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರನ್ನು ಉಡುಪಿಯ ಡಾ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು . ಆದರೆ ಗುರುವಾರ ಚಿಕಿತ್ಸೆ ಫಲಿಸದೆ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೊರೊನಾವೈರಸ್‌ಗೆ ಸಂಬಂಧಿಸಿದ ಸಾವಿನ ಸಂಖ್ಯೆ ಆರಕ್ಕೆ ಏರಿದೆ. ಏತನ್ಮಧ್ಯೆ, ಉಡುಪಿ ಡಿಎಚ್‌ಒ ಡಾ| ಸುದೀರ್‌ ಚಂದ್ರ ಸೂಡಾ ಸಾವಿನ ಕುರಿತು ಖಚಿತಪಡಿಸದೆ ಆರೋಗ್ಯ ಇಲಾಖೆ ವಿವರವಾದ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಸಂಜೆ ಬಿಡುಗಡೆಯಾದ ಜಿಲ್ಲಾಆರೋಗ್ಯ ಬುಲೆಟಿನ್ ಪ್ರಕಾರ, ಉಡುಪಿಯಲ್ಲಿ ಈವರೆಗೆ 1,786 ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು , ಹೊಸದಾಗಿ ಬುಧವಾರ 53 ಪ್ರಕರಣಗಳು ವರದಿಯಾಗಿದೆ. ಈವರೆಗೆ 1,382 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ 401 ಸಕ್ರಿಯ ಪ್ರಕರಣಗಳಾಗಿವೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×