ಉಡುಪಿ : ಇಲ್ಲಿನ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಕಣ್ತಪ್ಪಿನಿಂದ ಇಳಿಪಾಷಣ ಬೆರೆಸಿಟ್ಟೀದ್ದ ಪಪ್ಪಾಯ ಸೇವಿಸಿದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುದಿ ಗ್ರಾಮದ ದೇವರಗುಂಡದ ಶ್ರೀಮತಿ(43) ಮೃತಪಟ್ಟವರು. ಇವರ ತಮ್ಮ ಮಗಳ ಕ್ಯಾಶು ಫ್ಯಾಕ್ಟರಿಯಲ್ಲಿ ಕಣ್ತಪ್ಪಿ ಇಲಿಪಾಶಾಣ ಬೆರೆಸಿದ್ದ ಪಪ್ಪಾಯ ಸೇವಿಸಿದ್ದಾರೆ. ಇಳಿಗಳ ಕಾಟ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪಪ್ಪಾಯಿಯಲ್ಲಿ ಇಲಿಪಾಶಾನ ಬೆರೆಸಿಡಲಾಗಿತ್ತು.
ಆದರೆ, ಅಕ್ಟೋಬರ್ 19ರಂದು ಮನೆಯಲ್ಲಿ ಇಲಿಗಳಿಗೆ ಪಪ್ಪಾಯಿ ಹಣ್ಣಿನಲ್ಲಿ ಇಲಿ ಪಾಶಾಣವನ್ನು ಹಾಕಿಟ್ಟಿದ್ದು, ಶ್ರೀಮತಿಯವರು ಕಣ್ತಪ್ಪಿನಿಂದ ಅದೇ ಪಪ್ಪಾಯಿ ಹಣ್ಣುನ್ನು ತಿಂದಿದ್ದು, ಇದರಿಂದಾಗಿ ಅವರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Follow us on Social media