ಉಡುಪಿ : ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮಾನವೀಯ ನೆಲೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ ನಿಖಿತಾ ಅವರ ಕುಟುಂಬಕ್ಕೆ 20 ಲಕ್ಷ. ರೂ.ಗಳ ಪರಿಹಾರ ಧನವನ್ನು ಹಸ್ತಾಂತರ ಮಾಡಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಕುಟುಂಬದ ನೋವಿಗೆ ಸ್ಪಂದಿಸಿದ ಆಸ್ಪತ್ರೆ ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳ ಸ್ಪಂದನೆ ಶ್ಲಾಘನೀಯ.
ಈ ಬಗ್ಗೆ ಧ್ವನಿಯೆತ್ತಿ ಸಂಘಟಿತವಾದ ಅಳಲು ತೋಡಿಕೊಂಡು ಸಾಮಾಜಿಕ ನ್ಯಾಯ ಕೊಡಿಸಲು ಹಲವರು ಪಣತೊಟ್ಟಿದ್ದರು.
ಘಟನೆ ಬಳಿಕ ಆರಂಭವಾದ ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳ ಹೋರಾಟದ ಕಾವು, ಹಲವು ಮನವಿಗಳು ಜೊತೆಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆಗೆ ಕುಲಾಲ ಸಮುದಾಯ ಸಂಘಟನೆಯ ನಾಯಕರು/ಸಾಮಾಜಿಕ ಹೋರಾಟಗಾರರು ನಿರಂತರ ಮಾತುಕಥೆಯನ್ನು ನಡೆಸಿದ್ದರ ಪರಿಣಾಮ ಇಂದು ಫಲ ಸಿಕ್ಕಂತಾಗಿದೆ.
ನಿಖಿತಾ ತಂದೆ-ತಾಯಿಗೆ ಈ ಪರಿಹಾರ ಹಣ ಮಗಳ ಸಾವಿಗೆ ಸಮಾಧಾನ ನೀಡದು.
ಆದರೆ ಮಗಳಿಗಾಗಿ ಕಟ್ಟಿದ ಹೊಸಮನೆಯ ಸಾಲ ತೀರಿಸಲು, ಬೇರೆ ಮಕ್ಕಳಿಲ್ಲದ ಅವರ ನಾಳೆಯ ಬದುಕಿಗೆ ಪುಟ್ಟ ಆಸರೆಯಾಗಿದೆ.
ಒಂದು ನ್ಯಾಯಪರ ಹೋರಾಟ, ಸಮುದಾಯ ಸಂಘಟನೆಗಳ ಮನವಿಗಳಿಗೆ ಸಿಕ್ಕ ಜಯವಿದು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ನಿಖಿತ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಈ ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ನಿಖಿತಾ ಅವರ ಪರ ನ್ಯಾಯದ ಕೂಗನ್ನು ಎಬ್ಬಿಸಿದ ಅಖಿಲಾ ಭಾರತ ವಿದ್ಯಾರ್ಥಿ ಪರಿಷತ್, ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು, ಪ್ರಜ್ಞಾವಂತ ಹೋರಾಟದ ಮನಸ್ಸುಗಳ ನಿರಂತರ ಹೋರಾಟದ ಫಲವೇ ಇಂದು ನಿಖಿತಾ ಅವರ ಕುಟುಂಬಕ್ಕೆ ಸಹಾಯಧನದ ನೆರವು ಸಿಕ್ಕುವಂತೆ ಮಾಡಿದೆ.
Follow us on Social media