ಬೆಂಗಳೂರು: ರಾಜ್ಯದಲ್ಲಿ ಕೊರೋನ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ ಇಂದು ಉಡುಪಿ ಜಿಲ್ಲೆಯಲ್ಲಿ 210 ಪ್ರಕರಣಗಳು ಕೊರೋನ ಪಾಸಿಟಿವ್ ಆಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಉಡುಪಿಯಲ್ಲಿ 210 ಪ್ರಕರಣಗಳು ಕೊರೋನ ಪಾಸಿಟಿವ್ ಆಗಿವೆ. ಮಹಾರಾಷ್ಟ್ರದಿಂದ ಉಡುಪಿಗೆ 20 ಸಾವಿರ ಮಂದಿ ಆಗಮಿಸಿದ್ದಾರೆ. ಮುಂಬೈ, ಪುಣೆಯಿಂದ ಬಂದವರದಲ್ಲಿ ಹೆಚ್ಚಿನ ಪ್ರಕರಣಗಳು ಪಾಸಿಟಿವ್ ಆಗುತ್ತಿದೆ ಎಂದರು.
Follow us on Social media