ಪಾಟ್ನಾ : ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮೊದಲ ಹಂತದ 71 ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ”ಈ ಬಾರಿ ನ್ಯಾಯ, ಉದ್ಯೋಗ, ರೈತರಿಗಾಗಿ ಮಹಾಮೈತ್ರಿಗೆ ಮತ ನೀಡಿ” ಎಂದು ಬಿಹಾರ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ”ನ್ಯಾಯ, ಉದ್ಯೋಗ, ರೈತ ಕಾರ್ಮಿಕರಿಗಾಗಿ ಈ ಬಾರಿ ನಿಮ್ಮ ಮತವು ಮಹಾ ಮೈತ್ರಿಗೆ ಮಾತ್ರ ನೀಡಿ ಎಂದು ಮನವಿ ಮಾಡಿದ್ದು ಬಿಹಾರ ಮತದಾನದ ಮೊದಲ ಹಂತದಲ್ಲಿ ನಿಮ್ಮೆಲ್ಲರಿಗೂ ಶುಭವಾಗಲಿ” ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸ್ಪರ್ಧಿಸುತ್ತಿದೆ.
Follow us on Social media