ನವದೆಹಲಿ: ಕೊರೋನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ 14 ದಿನಗಳ ಮೂರನೇ ಲಾಕ್’ಡೌನ್ ಮೇ.4ರಿಂದ ಆರಂಭವಾಗಲಿದೆ. ಇದು ಮೇ.17ರವರೆಗೆ ಜಾರಿಯಲ್ಲಿರಲಿದೆ.
ಈ ಲಾಕ್’ಡೌನ್ ನಲ್ಲಿ ಮೊದಲೆರಡು ಲಾಕ್ಡೌನ್’ಗೆ ಹೋಲಿಕೆ ಮಾಡಿದರೆ ಸಾಕಷ್ಟು ವಿನಾಯಿತಿಗಳನ್ನು ನೀಡಲಾಗಿದೆ. ಕೊರೋನಾ ಪ್ರಕರಣಗಳು ಇರುವ ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್ಡೌನ್ ಇರಲಿದೆ.
ಮಾರ್ಚ್25ರಿಂದ 40ದಿನಗಳ ಕಾಲ ದೇಶದ್ಯಂತ ಜಾರಿಯಲ್ಲಿದ್ದ ಮೊದಲ ಎರಡು ಲಾಕ್’ಡೌನ್ ವೇಳೆ ಅಗತ್ಯ ವಸ್ತು ಹಾಗೂ ಸೇವೆಗಳನ್ನು ಹೊರತುಪಡಿಸಿ ಇನ್ನಾವುದೇ ಸೇವೆಗಳು ಲಭ್ಯವಿರಲಿಲ್ಲ.
ಜನರು ಕಡ್ಡಾಯವಾಗಿ ಮನೆಯಲ್ಲೇ ಇರಬೇಕಾಗಿತ್ತು. ಅದರ ಪರಿಣಾಮವಾಗಿ ದೇಶದಲ್ಲಿ ಕೊರೋನಾ ಸೋಂಕು ಹರಡುವವರೆಗೆ ವೇಗ ಕಡಿಮೆಯಾಗಿದೆ. ಆದರೆ, ಕೆಲ ರಾಜ್ಯಗಳಲ್ಲಿ ಈಗಲೂ ಸೋಂಕು ಹರಡುತ್ತಿದೆ. ಹೀಗಾಗಿ ಮೂರನೇ ಲಾಕ್’ಡೌನ್ ಜಾರಿಗೊಳಿಸಲಾಗಿದ್ದು, ಸೋಂಕು ಇರುವ ಸ್ಥಳಗಳಲ್ಲಿ ಬಹುತೇಕ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಈ ಲಾಕ್’ಡೌನ್ ವೇಳೆಯಲ್ಲೂ ದೇಶದಾದ್ಯಂತ ಕರ್ಫ್ಯೂ ಜಾರಿಯಲ್ಲಿದ್ದು, ಜನರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳುವ ಅಧಿಕಾರಿ ಜಿಲ್ಲಾಧಿಕಾರಿಗಳಿಗೆ ಇರಲಿದೆ.
Follow us on Social media