Breaking News

ಇಂತಹ ನಾಯಕನನ್ನು ಎಂದೂ ಕಂಡಿಲ್ಲ: ಕೊಹ್ಲಿ ನಾಯಕತ್ವ ವಿರುದ್ಧ ಗಂಭೀರ್ ಗರಂ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಸೋಲುಂಡು ಟೀಮ್ ಇಂಡಿಯಾ  ಸರಣಿಯನ್ನು ಸಮಬಲಗೊಳಿಸಲು ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮತ್ತೆ ಕಿಡಿಕಾರಿದ್ದಾರೆ.

ಹೊಸ ಚೆಂಡಿನಲ್ಲಿ ಜಸ್ಪ್ರೀತ್ ಬೂಮ್ರಾಗೆ ಕೇವಲ ಎರಡು ಓವರ್ ಮಾತ್ರೇ ನೀಡಿರುವ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಆಸ್ಟ್ರೇಲಿಯಾ 51 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿದೆ. ಈ ಸೋಲಿನಿಂದಾಗಿ ಟೀಮ್ ಇಂಡಿಯಾ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲೂ ಭಾರತೀಯ ಬೌಲಿಂಗ್ ಪಡೆ ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ 389 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.

ಎರಡನೇ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯದ್ದು “ಕಳಪೆ ನಾಯಕತ್ವ” ಎಂದು ಗಂಭೀರ್ ವಿವರಿಸಿದ್ದಾರೆ. “ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಈ ನಾಯಕತ್ವ ಅರ್ಥವಾಗುತ್ತಿಲ್ಲ. ಈ ರೀತಿಯ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ತಂಡವನ್ನು ತಡೆಯಬೇಕಾದರೆ ಮುಂಚೂಣಿಯಲ್ಲಿ ವಿಕೆಟ್ ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ಈಗಾಗಲೇ ಸಾಕಷ್ಟ ಮಾತನಾಡಿದ್ದೇವೆ. ಹಾಗಿದ್ದರೂ ನೀವು ಫೋರ್ತ್ ಡೌನ್ ಬೌಲರ್‌ನನ್ನು ಕೇವಲ ಎರಡು ಓವರ್‌ಗಳಿಗೆ ಮೊಟಕುಗೊಳೀಸುತ್ತೀರಿ” ಎಂದಿದ್ದಾರೆ ಗಂಭೀರ್.

“ಇದು ಟಿ20ಕ್ರಿಕೆಟ್ ಅಲ್ಲ. ಒಂದು ದಿನದ ಪಂದ್ಯ. ಕೇವಲ ಎರಡು ಓವರ್‌ಗಳಿಗೆ ನಿಮ್ಮ ಪ್ರಧಾನ ಬೌಲರ್‌ನನ್ನು ನಿಲ್ಲಿಸಿದರೆ ಆ ನಾಯಕತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದರ ಹಿಂದಿನ ಕಾರಣಗಳು ನನಗೆ ಅರ್ಥವಾಗುತ್ತಿಲ್ಲ. ಇದು ಅತ್ಯಂತ ಕಳಪೆ ನಾಯಕತ್ವವಾಗಿದೆ” ಎಂದು ಗಂಭೀರ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಆರನೇ ಬೌಲರ್‌ನ ಕೊರತೆಯ ಬಗ್ಗೆಯೂ ಗಂಭೀರ್ ಮಾತನಾಡಿದರು. “ವಾಷಿಂಗ್ಟನ್ ಸುಂದರ್ ಅಥವಾ ಶಿವಂ ದುಬೆ ರೀತಿಯ ಬೌಲರ್‌ಗಳು ತಂಡದಲ್ಲಿದ್ದರೆ ಅವರಿಗೆ ಅವಕಾಶವನ್ನು ನೀಡಬಹುದಾಗಿತ್ತು. ಆದರೆ ಅವರು ತಂಡದಲ್ಲೇ ಸ್ಥಾನವನ್ನು ಪಡೆಯದಿರುವುದು ಆಯ್ಕೆಯಲ್ಲಿನ ತಪ್ಪುಗಳನ್ನು ಕೂಡ ತೋರಿಸುತ್ತಿದೆ” ಎಂದು ಗಂಭೀರ್ ಹೇಳಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×