ಬೆಂಗಳೂರು : ಕೊರೋನಾ ಪೀಡಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವ ಭೈರತಿ ಬಸವರಾಜ್ ವಿದ್ಯಾರಣ್ಯಪುರದಲ್ಲಿ ಆಹಾರ ಪೊಟ್ಟಣ ವಿತರಿಸಿದರು. ಎನ್ ಟಿ ಐ ಮೈದಾನದಲ್ಲಿ ಆಹಾರ ಪೊಟ್ಟಣ ಪಡೆಯಲು ಸುಮಾರು 10 ಸಾವಿರ ಮಂದಿ ಸೇರಿದ್ದರು.
ಈ ವೇಳೆ ಲಾಕ್ ಡೌನ್ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಸಾಮಾಜಿಕ ಅಂತರವನ್ನು ಸಹ ಕಾಯ್ದುಕೊಂಡಿರಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ವಲಸೆ ಕಾರ್ಮಿಕರು ಆಹಾರಕ್ಕಾಗಿ ನೂರು ನುಗ್ಗಲು ಉಂಟಾಗಿತ್ತು.
ಸಚಿವರು ಆಹಾರ ನೀಡುತ್ತಾರೆ ಎಂಬ ವಿಷಯ ತಿಳಿದ ಕೂಡಲೇ ಸ್ಥಳೀಯರು ವಲಸೆ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿ ಅಲ್ಲಿ ಗುಂಪು ಸೇರಿದ್ದರು. ಈ ಬಗ್ಗೆ ಅಲ್ಲಿನ ಸ್ಥಳೀಯರು ಟ್ವಿಟ್ಟರ್ ನಲ್ಲಿ ಆತಂಕ ವ್ಯಕ್ತ ಪಡಿಸಿದ್ದಾರೆ.
ವಿದ್ಯಾರಣ್ಯಪುರದ ಎನ್ ಟಿ ಐ ಗ್ರೌಂಡ್ ನಲ್ಲಿ ಸಾವಿರಾರು ಮಂದಿ ಸೇರಿದ್ದರು, ಅಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ, ಅಲ್ಲಿ ನೆರೆದಿದ್ದವರು ಮಾಸ್ಕ್ ಕೂಡ ಧರಿಸಿರಲಿಲ್ಲ ಇದನ್ನು ನೋಡಿ ನನಗೆ ಶಾಕ್ ಆಯ್ತು ಎಂದು ಸ್ಥಳೀಯರೊಬ್ಬರು ಆತಂಕ ವ್ಯಕ್ತ ಪಡಿಸಿದ್ದಾರೆ.
Follow us on Social media