Breaking News

ಆರ್ ಬಿಐ ವಿತ್ತೀಯ ನೀತಿ ಪ್ರಕಟ: ರೆಪೊ ದರ, ರಿವರ್ಸ್ ರೆಪೊ ದರದಲ್ಲಿ ಯಥಾಸ್ಥಿತಿ ಮುಂದುವರಿಕೆ

ಮುಂಬೈ: ಕೋವಿಡ್-19 ಸಾಂಕ್ರಾಮಿಕದಿಂದ ದೇಶದ ಆರ್ಥಿಕ ಚಟುವಟಿಕೆಗಳು ತೀವ್ರ ಕುಸಿತ ಕಂಡಿರುವ ಈ ಸಂದರ್ಭದಲ್ಲಿ ರೆಪೊ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ವ್ಯತ್ಯಾಸ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ.ಪ್ರಸ್ತುತ ಬ್ಯಾಂಕ್ ನಲ್ಲಿ ರೆಪೊ ದರ ಶೇಕಡಾ 4ರಷ್ಟಿದೆ.ರಿವರ್ಸ್ ರೆಪೊ ದರ ಶೇಕಡಾ 3.35ರಷ್ಟಿದೆ.

ಆದರೆ ಭವಿಷ್ಯದಲ್ಲಿ ಅಗತ್ಯಬಿದ್ದರೆ ಹೆಚ್ಚು ದರ ಕಡಿತವಾಗಬಹುದು ಎಂಬ ಮುನ್ಸೂಚನೆಯನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೀಡಿದ್ದಾರೆ. ಇಂದು ಮುಂಬೈಯಲ್ಲಿ ವರ್ಚುವಲ್ ಸಭೆ ಮೂಲಕ ಮಾಧ್ಯಮಗಳಿಗೆ ಜುಲೈಯಿಂದ ಸೆಪ್ಟೆಂಬರ್ ವರೆಗಿನ ವಿತ್ತೀಯ ಹಣಕಾಸು ನೀತಿ ಪ್ರಕಟಿಸಿದ ಗವರ್ನರ್ ಶಕ್ತಿಕಾಂತ್ ದಾಸ್, ಈಗಿನ ಸ್ಥಿತಿಯಲ್ಲಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿನ ಹೋರಾಟ ಮುಖ್ಯವಾಗಿದೆ ಎಂದರು.

ಆರ್ ಬಿಐ ಗವರ್ನರ್ ವಿತ್ತೀಯ ನೀತಿ ಪ್ರಕಟಿಸುತ್ತಿದ್ದಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡುಬಂತು. ನೀತಿ ಪ್ರಕಟಕ್ಕೆ ಮುನ್ನ ದೇಶೀಯ ಷೇರು ಮಾರುಕಟ್ಟೆಯ ಇಂದು ಬೆಳಗಿನ ವಹಿವಾಟಿನಲ್ಲಿ ತುಸು ಏರಿಕೆ ಕಂಡುಬಂದಿತ್ತು.

ಹಣದುಬ್ಬರ ಏರಿಕೆಯ ಎಚ್ಚರಿಕೆ ನೀಡಿದ ಆರ್ ಬಿಐ: ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಹಣದುಬ್ಬರ ಏರಿಕೆಯಾಗುವ ಸಾಧ್ಯತೆಯಿದೆ. ಅದರೆ ವರ್ಷದ ಇನ್ನುಳಿದ 6 ತಿಂಗಳಲ್ಲಿ ಸರಳವಾಗಬಹುದು ಎಂಬ ಸಮಾಧಾನದ ಸಂಗತಿಯನ್ನು ಹೇಳಿದ್ದಾರೆ.

ಪೂರೈಕೆ ಸರಪಣಿಯಲ್ಲಿ ತೊಡಕು ಇದ್ದು ಇದರಿಂದ ಎಲ್ಲಾ ವಲಯಗಳಲ್ಲಿ ಹಣದುಬ್ಬರದ ಒತ್ತಡ ಕಂಡುಬರಬಹುದು. ಜಾಗತಿಕ ಮಟ್ಟದಲ್ಲಿ ಕೊರೋನಾ ಸಮಸ್ಯೆಯಿರುವುದರಿಂದ ಆರ್ಥಿಕ ಪುನಶ್ಚೇತನ ಸುಲಭವಾಗಿ ಸಾಧ್ಯವಿಲ್ಲ. ಖಾರಿಫ್ ಬೆಳೆಗಳಿಂದಾಗಿ ಗ್ರಾಮೀಣ ಭಾಗದಲ್ಲಿ ಚಟುವಟಿಕೆಗಳು ಗರಿಗೆದರಬಹುದು. ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡರೂ ಸಹ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವುದರಿಂದ ಅಲ್ಲಲ್ಲಿ ಲಾಕ್ ಡೌನ್ ಆಗುತ್ತಿದೆ ಎಂದರು.

ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.

ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಕೇಂದ್ರ ಬ್ಯಾಂಕಿನಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಿವರ್ಸ್ ರೆಪೊ ದರ: ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×