ಮಂಗಳೂರು: ಕೊರೊನಾ ಸೋಂಕು ತಪಾಸಣೆ ಮಾಡಿಸಿಕೊಳ್ಳಿ, ಆರೋಗ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸಹಕರಿಸಿ ಎಂದು ಇಂದು ಮಾಜಿ ಸಚಿವ ಯು.ಟಿ ಖಾದರ್ ಮನೆ ಮನೆಗೂ ತೆರೆಳಿ ಮನವಿ ಮಾಡಿಕೊಂಡಿದ್ದಾರೆ.
ವಾರದ ಹಿಂದೆ ಮಂಗಳೂರಿನ ಹೊರ ವಲಯದ ತೊಕ್ಕೊಟ್ಟು ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಸ್ಥಳೀಯ ನಾಗರಿಕರು ಇಲ್ಲಿನ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಖಾದರ್ ಮಸೀದಿ ಮೈಕ್‍ನಲ್ಲಿ ಇಂದು ಮನವಿ ಮಾಡಿದರು.
ಸೋಂಕು ದೃಢಪಟ್ಟ ತೊಕ್ಕೊಟ್ಟು ಮೂಲದ ವ್ಯಕ್ತಿ ಚೆಂಬುಗುಡ್ಡೆ ಮಸೀದಿಗೆ ಹಲವು ಬಾರಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದರು. ಈ ಹಿನ್ನೆಲೆ ಆರೋಗ್ಯ ಇಲಾಖೆ ತಂಡ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ನಡೆಸುತ್ತಿದ್ದು, ಖಾದರ್ ಕೂಡ ಸ್ವತಃ ತಪಾಸಣೆಗೆ ಒಳಗಾಗಿ ಇತರೆ ಮುಸ್ಲಿಂ ಬಾಂಧವರು ಮತ್ತು ನಾಗರಿಕರು ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಮಾಡಿಸಿ ಎಂದು ಕೋರಿಕೊಂಡರು.
ಹಾಗೆಯೇ ಆರೋಗ್ಯ ಇಲಾಖೆಯ ವೈದರು, ಸಿಬ್ಬಂದಿ ತಂಡದ ಜೊತೆ ಸಹಕರಿಸಿ ಅಂತ ಮಸೀದಿ ಮೈಕ್ ನಲ್ಲಿ ಮನವಿ ಮಾಡಿಕೊಂಡರು. ಮಾಜಿ ಸಚಿವರ ಮನವಿ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ಆಗಮಿಸಿದ ನಾಗರಿಕರು ಆರೋಗ್ಯ ತಪಾಸಣೆಗೆ ಮಾಡಿಸಿಕೊಂಡರು.
Follow us on Social media