ನವದೆಹಲಿ: ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ಗೆ ಜೋಡಣೆ ಮಾಡುವ ಗಡುವನ್ನು ಕೊನೆಯ ದಿನವನ್ನು ಮುಂದಿನ ವರ್ಷದ ಮಾರ್ಚ್ 31ರವರೆಗೂ ಸರ್ಕಾರ ವಿಸ್ತರಿಸಿದೆ.ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ ಜೋಡಣೆ ಮಾಡುವ ಗಡುವನ್ನು ಮುಂದಿನ
ವರ್ಷದ ಮಾರ್ಚ್ 31ರವರೆಗೂಬ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮೊದಲು 1 ಲಕ್ಷದವರೆಗೂ ತೆರಿಗೆ ಬಾಧ್ಯತೆ ಇದ್ದಲ್ಲಿ ನವೆಂಬರ್ 30, 2020ರವರೆಗೂ ಗಡುವನ್ನು ಆದಾಯ ತೆರಿಗೆ ಇಲಾಖೆ ವಿಸ್ತರಿಸಿತ್ತು.
Follow us on Social media