ಹೈದರಾಬಾದ್: ನಮಗೆ ಇದ್ದದ್ದು ಒಬ್ಬನೇ ಮಗ. ಆತನನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ. ಆದರೆ ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ಗಲ್ವಾನ್ ನಲ್ಲಿ ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್ ಸಂತೋಷ್ ಬಾಬಿ ಪೋಷಕರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರವಷ್ಟೇ ನನ್ನ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದ. ಗಡಿ ವಿವಾದ ಕುರಿತು ಮಾಧ್ಯಮದಲ್ಲಿ ಬರುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ ಎಂದಿದ್ದ. ಹೈದರಾಬಾದ್’ಗೆ ಆತ ವರ್ಗವಾಗಿದ್ದ. ಆದರೆ, ಲಾಕ್’ಡೌನ್ ಕಾರಣ ವರ್ಗ ತಡವಾಯಿತು. ಮುಂದಿನ ತಿಂಗಳು ಬರುವುದಾಗಿ ಹೇಳಿದ್ದೆ ಎಂದು ಕಣ್ಣೀರಿಟ್ಟರು.
ಇದೇ ವೇಳೆ ಮಾತನಾಡಿದ ಸಂತೋಷ್ ತಂದೆ ಉಪೇಂದ್ರ ಅವರು, ನಾನು ಯೋಧ ಆಗಬೇಕುಎಂದುಕೊಂಡಿದ್ದೆ. ಆದರೆ, ಆಗಲಿಲ್ಲ. ನಮ್ಮಮಗ ಸೇನೆ ಸೇರುವ ತನ್ನ ಕನಸು ಈಡೇರಿಸಿಕೊಂಡಿದ್ದ. ಆತ ಯಾವಾಗಲೂ ಚಿನ್ನದ ಪದಕ ಗೆಲ್ಲುತ್ತಿದ್ದ. ತನಗೆ ಏನಾದರೂ ಆದರೆ, ಅದನ್ನು ಅರಗಿಸಿಕೊಳ್ಳುವ ಶಕ್ತಿ ತಂದುಕೊಳ್ಳಿ ಎಂದು ಮಗ ಹೇಳುತ್ತಿದ್ದ ಎಂದು ತಿಳಿಸಿದ್ದಾರೆ.
Follow us on Social media