ನವದೆಹಲಿ: ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಅಮೆರಿಕ ಸಂಸ್ಥೆಯೊಂದು 4,546 ಕೋಟಿ ರೂ ಹೂಡಿಕೆ ಮಾಡಿದೆ. ಆ ಮೂಲಕ ಸಂಸ್ಥೆಯ ಹೂಡಿಕೆ ಸಂಗ್ರಹಣೆ 1 ಲಕ್ಷ ಕೋಟಿ ರೂ ಗೆ ಏರಿಕೆಯಾಗಿದೆ.
ಅಮೆರಿಕ ಮೂಲದ ಟೆಕ್ಸಾಸ್ ಪೆಸಿಫಿಕ್ ಗ್ರೂಪ್ (TPG) ರಿಲಯನ್ಸ್ ಜಿಯೋದ ಶೇ. 0.93ರಷ್ಟು ಷೇರುಗಳನ್ನು ಸುಮಾರು 4,546 ಕೋಟಿ ರೂಗಳನ್ನು ನೀಡಿ ಖರೀದಿ ಮಾಡಿದೆ. ಜಿಯೋದ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ TPG ಹೂಡಿಕೆ ಮಾಡಿದ್ದು, ಆ ಮೂಲಕ ಜಿಯೋದಲ್ಲಿ ಹೂಡಿಕೆ ಮಾಡಿದ 8ನೇ ಸಂಸ್ಥೆಯಾಗಿದೆ.
ಇದಕ್ಕೂ ಮೊದಲು ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬದಲಾ, ಅದಿಯಾ ಸಂಸ್ಥೆಗಳು ಹೂಡಿಕೆ ಮಾಡಿದ್ದವು.
ಈ ಹಿಂದೆ ಅಬುಧಾಬಿ ಮೂಲದ ಮುಬದಲಾ ಸಂಸ್ಥೆ ಬಳಿಕ ಇದೀಗ ಅಬುಧಾಬಿ ಹೂಡಿಕೆ ಪ್ರಾಧಿಕಾರ (Abu Dhabi Investment Authority-ADIA) ಜಿಯೋದ ಶೇ 1.16 ರಷ್ಟು ಷೇರುಗಳನ್ನು5,683 ಕೋಟಿ ರೂ. ಗಳಿಗೆ ಖರೀದಿಸಿತ್ತು. ಅಬುಧಾಬಿ ಮೂಲದ ಮುಬದಲಾ ಸಂಸ್ಥೆ ಜಿಯೋದ ಶೇ 1.85 ರಷ್ಟು ಪಾಲನ್ನು 9,093 ಕೋಟಿ ರೂ. ಗಳಿಗೆ ಖರೀದಿಸಿತ್ತು. ಇದೀಗ ಅಬುಧಾಬಿ ಮೂಲದ ಮತ್ತೊಂದು ಸಂಸ್ಥೆ ADIA ಜಿಯೋ ಷೇರುಗಳನ್ನು ಖರೀದಿ ಮಾಡಿದೆ.
ಗಮನಾರ್ಹ ಸಂಗತಿಯೆಂದರೇ ಕಳೆದ 6 ವಾರಗಳಲ್ಲಿ ಜಿಯೋದಲ್ಲಿ ಹೂಡಿಕೆ ಮಾಡಿದ 7ನೇ ಸಂಸ್ಥೆ ಇದಾಗಿದೆ. ಈ ಹಿಂದೆ ಕಳೆದ ಏಪ್ರಿಲ್ 22ರಂದು ಫೇಸ್ ಬುಕ್ ಸಂಸ್ಥೆ ಶೇ. 9.99ರಷ್ಟು ಷೇರು ಖರೀದಿ (87,655.35 ಕೋಟಿ ರೂ) ಮಾಡಿ ಅಚ್ಚರಿ ಮೂಡಿಸಿತ್ತು. ಬಳಿಕ ಮೇ 3ರಂದು ಸಿಲ್ವರ್ ಲೇಕ್ ಸಂಸ್ಥೆ ಶೇ. 1.15ರಷ್ಟು ಷೇರು (5,655.75 ಕೋಟಿ ರೂ.) ಖರೀದಿ ಮಾಡಿತ್ತು. ಬಳಿಕ ಮೇ 8ರಂದು ವಿಸ್ತಾ ಸಂಸ್ಥೆ ಶೇ.2.32ರಷ್ಟು (11,367 ಕೋಟಿ ರೂ) ಷೇರು ಖರೀದಿ ಮಾಡಿತ್ತು.
ಇದಾದ ನಂತರ ಮೇ 17ರಂದು ಜನರಲೆ ಅಟ್ಲಾಂಟಿಕ್ ಸಂಸ್ಥೆ ಶೇ.1.34ರಷ್ಟು (6598.38 ಕೋಟಿ ರೂ) ಷೇರು ಖರೀದಿ ಮಾಡಿತ್ತು. ಮೇ 22ರಂದು ಕೆಕೆಆರ್ ಶೇ. 2.32ರಷ್ಟು (11,367 ಕೋಟಿ ರೂ) ಷೇರು ಖರೀದಿ ಮಾಡಿತ್ತು. ಇತ್ತೀಚೆಗೆ ಅಬುದಾಬಿ ಮೂಲದ ಮುಬದಲಾ ಶೇ.1.85ರಷ್ಟು ಪಾಲುದಾರಿಕೆ ಹೊಂದಿತ್ತು.
Follow us on Social media