ಅಬುಧಾಬಿ: ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಯುಎಇಯ ರಾಜಧಾನಿ ಅಬುಧಾಬಿ ತಲುಪಿದ್ದಾರೆ.
ಅಬು ಧಾಬಿ ಏರ್ಪೋರ್ಟ್ ತಲುಪುತ್ತಿದ್ದಂತೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಏರ್ಪೋರ್ಟ್ಗೆ ತೆರಳಿ ಖುದ್ದಾಗಿ ಆಲಿಂಗಿಸಿ ಪ್ರಧಾನಿಯನ್ನು ಬರಮಾಡಿಕೊಂಡರು.
ಕೆಲ ತಿಂಗಳ ಹಿಂದೆ ನಿಧನರಾಗಿರುವ ಯುಎಇ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅವರ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದು, ಈ ವೇಳೆ ಉಭಯ ದೇಶದ ನಾಯಕರು ಕೆಲಹೊತ್ತು ಮಾತುಕತೆ ನಡೆಸಿದರು.
Follow us on Social media