ನವದೆಹಲಿ : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ಎರಡನೇ ಹಂತದ ಅನ್‌ಲಾಕ್ ಅವಧಿ ನಡೆಯುತ್ತಿದ್ದು, ಅನ್‌ಲಾಕ್ 3.0 ಆಗಸ್ಟ್ 1ರಿಂದ ಪ್ರಾರಂಭವಾಗಲಿದೆ.
ಮುಂದಿನ ಹಂತದ ಅನ್‌ಲಾಕ್‌ನಲ್ಲಿ ಶಾಲಾ-ಕಾಲೇಜುಗಳ ಮೇಲೆ ನಿರ್ಬಂಧ ಮುಂದುವರೆಯಲಿದ್ದು, ಮೆಟ್ರೋ ಹಾಗೂ ರೈಲು ಸಂಚಾರ ಮತ್ತೆ ಆರಂಭವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ವರದಿಯೊಂದರ ಪ್ರಕಾರ ಮೂರನೇ ಹಂತದ ಅನ್‌ಲಾಕ್ ಅವಧಿಯ ಸಂದರ್ಭ ಸಿನಿಮಾ ಮಂದಿರಗಳು ಹಾಗೂ ಜಿಮ್‌ಗಳನ್ನು ತೆರಯಲು ಅವಕಾಶ ಕಲ್ಪಿಸಬಹುದು. ಆದರೆ, ಸಿನಿಮಾ ಮಂದಿರಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೀಟುಗಳ ವ್ಯವಸ್ಥೆಗಳನ್ನು ಮಾಡಿ. ಅಲ್ಲದೇ ಜಿಮ್‌ಗಳಲ್ಲಿ ಕೂಡಾ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಹಾಗೂ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿದ್ದಲ್ಲಿ ಅವಕಾಶ ಕಲ್ಪಿಸಬಹುದು ಎಂದು ವರದಿಯಾಗಿದೆ.
ಇನ್ನು ಥಿಯೇಟರ್ ಮಾಲಕರು ಶೇ.50ರಷ್ಟು ಆಸನಗಳ ವ್ಯವಸ್ಥೆ ಮಾಡಿ ಸಿನಿಮಾ ಮಂದಿರ ತೆರೆಯಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
Follow us on Social media