ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಬಡಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳ ಪ್ಯಾಕೆಟ್ ಮೇಲೆ ಬಿಜೆಪಿ ನಾಯಕರ ಭಾವಚಿತ್ರ ಇದ್ದು, ಮಕ್ಕಳ ಆಹಾರದ ಕಿಟ್ ಪ್ಯಾಕೆಟ್ ಅನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಬಯಲಾಗಿದೆ.
ಸಂಸದ ಡಿ.ಕೆ.ಸುರೇಶ್ ಆನೇಕಲ್ ವಿಧಾನಸಭಾ ಕ್ಷೇತ್ರದ ಸರ್ಜಾಪುರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗಳಿಗೆ ಕಳುಹಿಸುವ ಆಹಾರದ ಕಿಟ್‌ನ ಸಕ್ಕರೆ ಪ್ಯಾಕೆಟ್ ಮೇಲೆ ಬಿಜೆಪಿ ನಾಯಕರ ಭಾವಚಿತ್ರ ಹೆಸರಾಕಿಕೊಳ್ಳುತ್ತಿರುವ ಹಗರಣ ಹೊರಗೆಳೆದಿದ್ದಾರೆ.
ಸಂಸದ ಡಿ ಕೆ ಸುರೇಶ್ ಮತ್ತು ಶಾಸಕ ಬಿ ಶಿವಣ್ಣ ಹಾಗೂ ಉಗ್ರಪ್ಪ ಈ ಪ್ರಕರಣವನ್ನು ಬಯಲಿಗೆಳೆದ್ದಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ ವಿಡಿಯೋ ಸುದ್ದಿ ಕೇಂದ್ರ ತಲುಪಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.