ಹುಬ್ಬಳ್ಳಿ: ಅವಶ್ಯಕತೆ ಇರುವಷ್ಟು ಪ್ರಯಾಣಿಕರು ಬಂದರೆ ಬುಧವಾರದಿಂದ ಹುಬ್ಬಳ್ಲಿ- ಕಣ್ಣೂರು, ಹಾಗೂ ಹುಬ್ಬಳ್ಳಿ-ಗೋವಾ ಸಂಚಾರ ಆರಂಭಿಸಲು ಇಂಡಿಗೋ ಏರ್ ಲೈನ್ಸ್ ನಿರ್ಧರಿಸಿದೆ. ಲಾಕ್ ಡೌನ್ ನಂತರ ಇದೇ ಮೊದಲ ಬಾರಿಗೆ ವಿಮಾನ ಸಂಚಾರ ಪುನಾರಾರಂಭಿಸಲು ಸಿದ್ಧತೆ ನಡೆಸಲಾಗಿದೆ.
ರಾಜ್ಯದ ಪ್ರಮುಖ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಕೂಡ ಸದಾ ಬ್ಯುಸಿಯಾಗಿರುವ ಏರ್ ಪೋರ್ಟ್ ಆಗಿತ್ತು, ಮೇ 25 ರಂದು ಸ್ಟಾರ್ ಏರ್ ವೇಸ್, ಬೆಂಗಳೂರಿನಿಂದ ದೆಹಲಿಗೆ ಸಂಚಾರ ಆರಂಭಿಸಿತ್ತು, ಆದರೆ ಪ್ರಯಾಣಿಕರ ಕೊರತೆಯಿಂದಾಗಿ ಸಂಚಾರ ರದ್ದುಗೊಳಿಸಿತ್ತು.
ಹೀಗಾಗಿ ಇಂಡಿಗೋ ಏರ್ ಲೈನ್ಸ್ ಹುಬ್ಬಳ್ಳಿ-ಕಣ್ಣೂರು ಮತ್ತು ಗೋವಾ ಸಂಚಾರ ಆರಂಭಿಸಲು ಮಂಗಳವಾರ ನಿರ್ಧರಿಸಿತ್ತು, ಆದರೆ ಪ್ರಯಯಾಣಿಕರ ಕೊರತೆಯಿಂದಾಗಿ ರದ್ದುಗೊಳಿಸಿತ್ತು. ಕೇವಲ 4 ಪ್ರಯಾಣಿಕರು ಮಾತ್ರ ಹುಬ್ಬಳ್ಳಿಗೆ ಬುಕ್ ಮಾಡಿದ್ದರು. ಆದರೆ ಹುಬ್ಬಳ್ಳಿಯಿಂದ ಹೋಗಲು ಯಾವುದೇ ಬುಕ್ಕಿಂಗ್ ಆಗಿರಲಿಲ್ಲ,
ಈಗಿನಂತೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಲ್ಲಿ ಯಾವುದೇ ಏರ್ ಸರ್ವೀಸ್ ಸಂಚಾರ ಆರಂಭಿಸಲು ಮುಂದೆ ಬರುವುದಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್ ಠಾಕ್ರೆ ಹೇಳಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಏರ್ ಸರ್ವೀಸ್ ಗಳು ಜುಲೈನಲ್ಲಿ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿವೆ ಮತ್ತು ಬುಕಿಂಗ್ ಅನ್ನು ಸಹ ಪ್ರಾರಂಭಿಸಿವೆ ಎಂದು ತಿಳಿಸಿದ್ದಾರೆ.
Follow us on Social media