ಹುಬ್ಬಳ್ಳಿ : ಕುಟುಂಬ ರಾಜಕಾರಣದಿಂದ ಅಸಮಾಧಾನಗೊಂಡಿರುವ ಕೆಲವರು ಬಿಜೆಪಿಗೆ ಬರುತ್ತಾರೆ. ಪರಿಸ್ಥಿತಿಗನುಗುಣವಾಗಿ ಯಾರ್‍ಯಾರು ಬರುತ್ತಾರೆಂಬುದನ್ನು ಕಾದು ನೋಡಿ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಇತರ ಪಕ್ಷಗಳಿಗಿಂತ ಉತ್ತಮ ಭವಿಷ್ಯವಿದೆ. ಹೀಗಾಗಿ ಬೇರೆಡೆಯಿಂದ ಹಲವರು ಪಕ್ಷಕ್ಕೆ ಬರಲಿದ್ದಾರೆ ಎಂದರು.ಆಪರೇಷನ್ ಕಮಲ ಇದ್ದರೂ ಇರಬಹುದು. ಆದರೆ ರಮೇಶ್ ಜಾರಕಿಹೊಳಿಯವರ ಆಪರೇಶನ್ ಕಮಲದ ಕುರಿತು ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.ಒಂದು ಹೇಳಿಕೆಯನ್ನಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ದೇಶದ ಐಕ್ಯತೆ ವಿಚಾರದಲ್ಲಿ ಹಿಂಸಾಚಾರ ಸಲ್ಲ ಎಂದು ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರ ಸಂಭಂಧಿಸಿದ ಪ್ರಶ್ನೆಗೆ ಉತ್ತರಿಸಿದರು.ನಮ್ಮ ಸಂಖ್ಯಾಬಲ ಹೆಚ್ಚಿರುವುದರಿಂದಲೇ ರಾಜ್ಯಸಭೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎ ಟೀಂ, ಬಿ ಟೀಂ ಎಂಬುದು ನಮ್ಮ ಪಕ್ಷದಲ್ಲಿಲ್ಲ. ಪಠ್ಯಪುಸ್ತಕ ಸಂಬಂಧಿಸಿದ ಎಲ್ಲಾ ಗೊಂದಲಗಳು ನಿವಾರಣೆಯಾಗಿರುವುದರಿಂದ ಅದರ ಬಗ್ಗೆ ಚರ್ಚೆ ಅನಗತ್ಯ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
Follow us on Social media