ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, 2000 ಇಸವಿಯಲ್ಲಿನ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಹುಬ್ಬೇರಿಸಿದ್ದಾರೆ. ಇದೇ ಇಸವಿಯಲ್ಲಿ ಅವರು ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಮಾಲ್ಡೀವ್ಸ್ ನ ಬೀಚ್ ವೊಂದರ ಬಳಿ ತೆಗೆದಿರುವ ಫೋಟೋದಲ್ಲಿ ಸರಳ, ಸುಂದರವಾಗಿ ಪ್ರಿಯಾಂಕಾ ಚೋಪ್ರಾ ಕಂಗೊಳಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಚಿತ್ರಕ್ಕೆ ಪತಿ ನಿಕ್ ಜೋನಾಸ್, ರಣವೀರ್ ಸಿಂಗ್ ಸೇರಿದಂತೆ ಹಲವು ಮಂದಿ ಕಾಮೆಂಟ್ ಮಾಡಿದ್ದಾರೆ.
ನಿಕ್ ಜೋನಾಸ್ ಬೆಂಕಿಯ ಎಮೋಜಿ ಬಳಸಿ ಕಾಮೆಂಟ್ ಮಾಡಿದ್ದರೆ, ಬ್ರೂಹ್ ಎಂದು ರಣವೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾ ಮ್ಯಾನೇಜರ್ ಅಂಜುಲಾ ಆಚಾರ್ಯ ಕೂಡಾ ಬೆಂಕಿಯ ಎಮೋಜಿ ಬಳಸಿದ್ದಾರೆ.
Follow us on Social media