ಹಾಸನ : ಇತ್ತೀಚೆಗಷ್ಟೇ ಮದುವೆಯಾಗಿದ್ದ ದಂಪತಿಗಳು ನದಿಯ ಸಮೀಪ ಸೆಲ್ಫಿ ಕ್ಲಿಕ್ಕಿಸಲು ಹೋದಾಗ ಜಾರಿ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ.
ಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ಘಟನೆ ನಡೆದಿದ್ದು . ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ(23) ನೀರುಪಾಲಾದ ದುರ್ದೈವಿಗಳು.
ಎರಡು ತಿಂಗಳ ಹಿಂದೆಯಷ್ಟೆ ಇವರಿಬ್ಬರ ಮದುವೆಯಾಗಿದ್ದು ಅರ್ಥೇಶ್ ವೆಂಗಳೂರು ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದ. ಆದರೆ ಲಾಕ್ಡೌನ್ ಕಾರಣ ದಂಪತಿಗಳು ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಬುಧವಾರ ದಂಪತಿಗಳು ಕೃತಿಕಾ ಮನೆಗೆ ಆಗಮಿಸಿದ್ದು ಗುರುವಾರ ಸಂಜೆ ತಿರುಗಾಡಿ ಬರುವುದಾಗಿ ಹೇಳಿ ಬೈಕಿನಲ್ಲಿ ತೆರಳಿದ್ದರು. ಆದರೆ ಬಹಳ ಸಮಯವಾದರೂ ಮರಳದಿದ್ದಾಗ ಮನೆಯವರು ಫೋನ್ ಮಾಡಿದ್ದಾರೆ. ಆದರೆ ಇಬ್ಬರ ಮೊಬೈಲ್ ಗಳು ಸ್ವಿಚ್ ಆಫ್ ಆಗಿದ್ದವು.ಆಗ ಮನೆಯವರು ದಂಪತಿಗಳ ಹುಡುಕಾಟಕ್ಕೆ ತೊಡಗಿದ್ದಾರೆ. ಆಗ ಹೇಮಾವತಿ ನದಿ ತೀರದಲ್ಲಿ ಬೈಕ್ ಸಿಕ್ಕಿದ್ದು ಹುಡುಕಾಟ ಮುಂದುವರಿಸಿದಾಗ ಮೀನುಗಾರರ ಬಲೆಗೆ ಕೃತಿಕಾ ಶವ ಸಿಲುಕಿದೆ. ತುಸು ವೇಳೆಯ ನಂತರ ಅರ್ಥೇಶ್ ಶವ ಸಹ ಪತ್ತೆಯಾಗಿದೆ.
ನದಿಯ ಸಮೀಪ ಸೆಲ್ಫಿ ತೆಗೆದುಕೊಳ್ಲಲು ಹೋದಾಗ ಕಾಲುಜಾರಿ ಬಿದ್ದು ದುರಂತ ನಡೆದಿದೆ ಎಂದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗಿದ್ದರೂ ಸಹ ಸಾವಿನ ಸುತ್ತ ಹಲವು ಅನುಮಾನಗಳಿದೆ. ಘಟನೆ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media