ಶೃಂಗೇರಿ: ಬೆಂಗಳೂರಿನಲ್ಲಿ ಧರ್ಮಾಂಧ ಪುಂಡರು ನಡೆಸಿದ ಗಲಭೆ ಹಸಿರಾಗಿರುವಾಗ ಶೃಂಗೇರಿಯಲ್ಲಿ ಎಸ್ ಡಿಪಿಐ ಮಾಡಿರುವ ಕೃತ್ಯ ಶ್ರೀ ಕ್ಷೇತ್ರವನ್ನು ಪ್ರಕ್ಷುಬ್ಧಗೊಳಿಸಿದೆ.
ಶೃಂಗೇರಿಯಲ್ಲಿ ಸ್ಥಾಪಿಸಿರುವ ಆದಿ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್ ಡಿಪಿಐ ಧ್ವಜ ಹಾರಾಡಿದ್ದು, ಕೋಮು ಸೌಹಾರ್ದತೆಯನ್ನು ಕದಡುವ ಯತ್ನವಾಗಿದೆ. ಈ ಘಟನೆಯಿಂದ ಹಿಂದೂ ಮುಖಂಡರು ಆಕ್ರೋಶಗೊಂಡಿದ್ದು, ಮಾಜಿ ಶಾಸಕ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ದುಷ್ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಮೆಯ ಮೇಲೆ ಹಾರಿಸಲಾಗಿದ್ದ ಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಶೃಂಗೇರಿಯ ಆದಿಶಂಕರಾಚಾರ್ಯರ ಪ್ರತಿಮೆ ಮೇಲೆ ಮುಸ್ಲಿಂ ಧರ್ಮಧ್ವಜವನ್ನು ಹಾಕಿರುವುದರ ವಿರುದ್ಧ ತಪ್ಪಿತಸ್ಥರನ್ನು ತತ್‌ಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಆದಿಶಂಕರಾಚಾರ್ಯ ಭಕ್ತ ವೃಂದದ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಆಗ್ರಹಿಸಲಾಗಿದೆ” ಎಂದು ಭಕ್ತ ವೃಂದದ ಸದಸ್ಯ ಸುಮಂತ್ ನೆಮ್ಮಾರ್ ತಿಳಿಸಿದ್ದಾರೆ.
Follow us on Social media