ಬೆಂಗಳೂರು: ಉಚ್ಚಾಟಿತ ಎಐಎಡಿಎಂಕೆ ಮುಖಂಡೆ ವಿ.ಕೆ.ಶಶಿಕಲಾ ಅವರನ್ನು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂಬ ಹೇಳಿಕೆಯನ್ನು ಬೆಂಗಳೂರು ಕೇಂದ್ರ ಕಾರಾಗೃಹ ಅಧಿಕಾರಿಗಳು ನಿರಾಕರಿಸಿದ್ದಾರೆ.
ಮುಂದಿನ 30 ದಿನಗಳಲ್ಲಿ ಬಿಡುಗಡೆಯಾಗಲಿರುವ ಕೈದಿಗಳ ಪಟ್ಟಿ ಸಿದ್ಧವಾಗಿದ್ದು ಅದರಲ್ಲಿ ಶಶಿಕಲಾ ಅವರ ಹೆಸರನ್ನು ಇನ್ನೂ ಪಟ್ಟಿಗೆ ಸೇರಿಸಿಲ್ಲ ಎಂದು ಜೈಲು ಇಲಾಖೆ ಮೂಲಗಳು ತಿಳಿಸಿವೆ.
ಅಪರಾಧಿಯನ್ನು ಬಿಡುಗಡೆ ಮಾಡುವಾಗ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅವರು ಬಿಡುಗಡೆಗೆ ಅರ್ಹರಾದ ದಿನಗಳು, ಹಿರಿಯ ಅಧಿಕಾರಿಗಳು ನೀಡಿದ ವಿಶೇಷ ರಜೆ ಮತ್ತು ಅವರು ಪೆರೋಲ್ ಪಡೆದ ದಿನಗಳ ಸಂಖ್ಯೆ, ಅವರನ್ನು ಬಿಡುಗಡೆ ಮಾಡುವಾಗ ಎಲ್ಲವನ್ನೂ ಪರಿಗಣಿಸಲಾಗುತ್ತದೆ.
ಕರ್ನಾಟಕ ಕಾರಾಗೃಹ ಇಲಾಖೆಯ ನಿಯಮಾವಳಿಗಳ ಪ್ರಕಾರ, ಸನ್ನಡತೆಗಾಗಿ ತಿಂಗಳಲ್ಲಿ ಮೂರು ದಿನ, ಶಿಸ್ತು ಮತ್ತಿತರ ಕಾರಣಗಳಿಗಾಗಿ ಮೂರು ದಿನ ರಜೆ ನಿಗದಿ ಮಾಡಲಾಗಿರುತ್ತದೆ. ವಿಶೇಷಾಧಿಕಾರದಲ್ಲಿ ಸೂಪರಿಂಟೆಂಡ್ 30 ದಿನಗಳ ಪೆರೋಲ್ ಮಾಡಬಹುದಾಗಿದೆ. ಮತ್ತು ಐಜಿ 60 ದಿನ ಪೆರೋಲ್ ನೀಡಬಹುದಾಗಿದೆ.
ಈ ಎಲ್ಲಾ ಅಂಶಗಳನ್ನು ಅಪರಾಧಿಯನ್ನು ಬಿಡುಗಡೆ ಮಾಡುವ ವೇಳೆ ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಆಗಸ್ಟ್ ನಲ್ಲಿ ಬಿಡುಗಡೆಯಾಗಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಶಿಕಲಾ ಮತ್ತಿಬ್ಬರ ಬಿಡುಗಡೆ ಸಂಬಂಧ ಇನ್ನೂ ನಿರ್ಧಾರವಾಗಿಲ್ಲ,ಮುಂದಿನ 30 ದಿನಗಳಲ್ಲಿ ಬಿಡುಗಡೆಯಾಗುವ ಪಟ್ಟಿಯಲ್ಲಿ ಶಶಿಕಲಾ ಹೆಸರಿಲ್ಲ ಎಂದು ಹೇಳಿದ್ದಾರೆ.
ಆದಾಯಕ್ಕೂ ಮೀರಿ ಅಧಿಕ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ2017ರ ಫೆಬ್ರವರಿಯಿಂದ ಜೈಲುವಾಸ ಅನುಭವಿಸುತ್ತಿದ್ದಾರೆ.
Follow us on Social media