ಶಿವಮೊಗ್ಗ : ರಾಜ್ಯದಲ್ಲಿ ಇರೋದು ಒಂದೇ ಮುಖ್ಯಮಂತ್ರಿ ಸ್ಥಾನ, ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿಗೆ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
- ಬಿಜೆಪಿಯವರಿಗೆ ಬೇರೆ ಪಕ್ಷದವರು ಅಧಿಕಾರದಲ್ಲಿ ಇರುವುದು ಇಷ್ಟವಿಲ್ಲ. ಮುಂದಿನ ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗಲು ಪ್ರಯತ್ನ ಪಡುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಈಶ್ವರಪ್ಪ, ರಾಜ್ಯದಲ್ಲಿ ಇರೋದು ಒಂದೇ ಮುಖ್ಯಮಂತ್ರಿ ಸ್ಥಾನ, ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೇ ಅಧಿಕಾರ ಹಿಡಿಯುತ್ತೇವೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಇರುವುದು ಒಂದೇ, ಮುಖ್ಯಮಂತ್ರಿ ಆಗುವುದು ಬಿಜೆಪಿಯವರು ಮಾತ್ರ ಎಂದಿದ್ದಾರೆ.ಇನ್ನು ನಿಮ್ಮ ಮನೆ ಮಕ್ಕಳನ್ನು ಸರಿಯಾಗಿ ಇಟ್ಟುಕೊಂಡರೆ ಅವರು ಏಕೆ ಬೇರೆ ಮನೆಗೆ ಹೋಗ್ತಾರೆ. ನಿಮ್ಮ ಶಾಸಕರನ್ನು ಶಿಸ್ತುಬದ್ದವಾಗಿ ಇಟ್ಟುಕೊಳ್ಳಿ. ಮಹಾರಾಷ್ಟ್ರದ ಶಾಸಕರು ಮೊದಲು ಸಿಎಂ ಭೇಟಿ ಆಗುವುದೇ ಕಷ್ಟ ಇತ್ತು. ಈಗ ಸರಿಪಡಿಸಿಕೊಳ್ಳುತ್ತೇವೆ ಅಂತಾ ಹೇಳಿದ್ದಾರೆ ಎಂದು ಮಹರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ್ದಾರೆ.