ಶಿವಮೊಗ್ಗ: ಅನಾರೋಗ್ಯಕ್ಕೀಡಾಗಿದ್ದ ತಾಯಿಯೊಂದಿಗೆ ಆಸ್ಪತ್ರೆಗೆ ಬಂದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹಿನ್ನೆಲೆ ಆಸ್ಪತ್ರೆಯ ವಾರ್ಡ್ ಬಾಯ್ ಹಾಗೂ ಅವನ ಸ್ನೇಹಿತರ ಮೇಲೆ ದೂರು ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಮೆಕ್‌ಗ್ಯಾನ್ ಆಸ್ಪತ್ರೆಯ ವಾರ್ಡ್ ಬಾಯ್ ಮನೋಜ್ ಮತ್ತು ಆತನ ಮೂವರು ಸಹಚರರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಾಲಕಿಯ ತಾಯಿಯನ್ನು ಇತ್ತೀಚೆಗೆ ಮೆಕ್‌ಗ್ಯಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿ ಅವಳ ತಾಯಿಯ ಅಗತ್ಯ ನೋಡಿಕೊಳ್ಲಲು ಗೆ ಆಸ್ಪತ್ರೆಯಲ್ಲಿದ್ದಳು. ವಾರ್ಡ್ ಬಾಯ್ ಆಗಿದ್ದ ಮನೋಜ್ ತಾಯಿ ಮತ್ತು ಮಗಳಿಗೆ ಆಹಾರವನ್ನು ತರುವ ಮೂಲಕ ಆಕೆಗೆ ಸಮೀಪವಾಗಿದ್ದ.
ಕೆಲವು ದಿನಗಳ ಹಿಂದೆ ಹಿಂಸಾತ್ಮಕ ಘಟನೆಗಳು ಸಂಭವಿಸಿದ ನಂತರ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು. ಆ ಕಾರಣದಿಂದ ಹೋಟೆಲ್ ಗಳು ಮುಚ್ಚಲ್ಪಟ್ಟಿದ್ದವು. ಅದರಿಂದ ಬಾಲಕಿಗೆ ತಾಯಿಗೆ ನೀಡಲು ಆಹಾರ ಸಿಕ್ಕಿರಲಿಲ್ಲ. ಹಾಗಾಗಿ ಆಕೆಗೆ ನೆರವಾಗುವ ನೆಪದಲ್ಲಿ ಬಾಲಕಿಯನ್ನು ಮನೋಜ್ ಕಾರಿನಲ್ಲಿ ಕರೆದೊಯ್ದಿದ್ದಾನೆ, ಕಾರಿನಲ್ಲಿ ಅವನ ಮೂವರು ಸ್ನೇಹಿತರೂ ಇದ್ದರು. ತುಸು ದೂರ ಹೋದ ನಂತರ ಒಂದು ನಿರ್ಜನ ಪ್ರದೇಶದಲ್ಲಿ ಆ ನಾಲ್ವರೂ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಬಾಲಕಿಯ ತಾಯಿ ಅಪರಾಧದ ಬಗ್ಗೆ ತಿಳಿದು ದೂರು ಕೊಟ್ಟಿದ್ದಾರೆ. ಸಧ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಕಲಾಗಿದ್ದು ಮನೋಜ್ ಹಾಗೂ ಅವನ ಸ್ನೇಹಿತರ ಪತ್ತೆಗಾಗಿ ಶೋಧ ನಡೆದಿದೆ.
Follow us on Social media