ಬೆಂಗಳೂರು: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ಸತತವಾಗಿ ಎರಡು-ಮೂರನೇ ಸ್ಥಾನವನ್ನು ಕಾಯ್ದುಕೊಂಡು ಬರುತ್ತಿದ್ದು, ಇದು ಹೀಗೆ ಮುಂದುವರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮೇಲ್ಮನೆಯ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು. ಕರ್ನಾಟಕ ಕೈಗಾರಿಕಾ ಸ್ನೇಹಿ ರಾಜ್ಯವಾಗಿದ್ದು, 2017-18 ರಲ್ಲಿ 55334 ಕೋಟಿ, 2018-19 ರಲ್ಲಿ 46963 ಕೋಟಿ 2019-20 ರಲ್ಲಿ 63177 ಕೋಟಿ ಮತ್ತು 2020-21 ರಲ್ಲಿ 47413 ಕೋಟಿ ಹಣ ಹರಿದುಬಂದಿದೆ.
ದೇಶಕ್ಕೆ 4 ಲಕ್ಷ ಕೋಟಿಯಷ್ಟು ವಿದೇಶ ಹೂಡಿಕೆ ಹರಿದು ಬಂದಾಗ 1.60 ಲಕ್ಷ ಕೋಟಿ ರಾಜ್ಯಕ್ಕೆ ಬಂದಿತ್ತು ಎನ್ನುವುದು ರಾಜ್ಯದ ಉದ್ಯಮ ಸ್ನೇಹಿ ವಾತಾವರಣಕ್ಕೆ ನಿದರ್ಶನ. ಸತತವಾಗಿ ಎರಡು ಮೂರನೇ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಮಾರಿಷಸ್, ಸಿಂಗಾಪುರ್, ಜಪಾನ್ ಜರ್ಮನಿ, ಯುಎ, ಯುಕೆ ನಿಂದ ಹೆಚ್ಚು ವಿದೇಶಿ ಬಂಡವಾಳ ಬರುತ್ತಿದೆ. ಚೀನಾ ದೇಶದಿಂದ ಬಂಡವಾಳ ಹೂಡಿಕೆದಾರರು ಹೊರ ಬರುವಾಗ ನಮ್ಮ ವಿಶೇಷ ಪ್ರಯತ್ನ ಮಾಡಲಾಯಿತು. ಉದ್ಯಮಿಗಳನ್ನು ಸೆಳೆಯಲು ಕಾರ್ಯಪಡೆ ರಚಿಸಲಾಗಿತ್ತು, ವಿದೇಶಿ ಹೂಡಿಕೆ ಸೆಳೆಯಲು ಎಲ್ಲ ಪ್ರಯತ್ನ ನಡೆಸಲಾಗಿದೆ ಎಂದರು.
Follow us on Social media